ಬಾಕಿ ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

RBS_1656
Published on

ಮೈಸೂರು: ಒಂದು ತಿಂಗಳ ಬಾಕಿ ವೇತನ ನೀಡುವ ಜತೆಗೆ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ನೌಕರರ ಸಂಘದ ವತಿಯಿಂದ ಸೋಮವಾರ ಕಾಲೇಜು ಎದುರು ಪ್ರತಿಭಟನೆ ನಡೆಯಿತು.

ತಿಂಗಳ ವೇತನವನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ಆದರೆ, ಡಿಸೆಂಬರ್ ತಿಂಗಳ ವೇತನ ನೀಡದ ಕರಣ ಸಂಕಷ್ಟ ಎದುರಿಸುವಂತಾ ಗಿದೆ. ವಿವಿಧಡೆಗಳಿಂದ ಆಗಮಿಸಿ ಮೈಸೂರಿನಲ್ಲಿ ನೆಲೆಸಿರುವ ನಮಗೆ ವೇತನವೇ ಜೀವನಾಧಾರವಾಗಿದ್ದು, ನಿಗದಿತ ಸಮಯಕ್ಕೆ ದೊರೆಯದಿರುವುದರಿಂದ ಪರದಾಡುವಂತಾಗಿದೆ. ಈ ಕುರಿತು ಕಾಲೇಜು ಆಡಳಿತ ಮಂಡಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

ನಮ್ಮದು ಸರ್ಕಾರಿ ಅನುದಾನಿತ ಸಂಸ್ಥೆ. ಹೀಗಾಗಿ, ಸರ್ಕಾರ ಶೇ.85ರಷ್ಟು ಹಾಗೂ ಉಳಿದ ಸಂಬಳವನ್ನು ಕಾಲೇಜು ಆಡಳಿತ ಮಂಡಳಿ ಪಾವತಿಸುತ್ತಿತ್ತು. ಆದರೆ, ಕಾಲೇಜನ್ನು ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವಾಗಿ ಪರಿವರ್ತಿಸಿದಾಗಿನಿಂದ ಸರ್ಕಾರ ತನ್ನ ಪಾಲಿನ ವೇತನ ನೀಡುವಲ್ಲಿ ಸತಾಯಿಸುತ್ತಿದೆ ಎಂದು ದೂರಿದರು.

ಕಾಲಕಾಲಕ್ಕೆ ಪ್ರಮೋಷನ್, ಇಎಲ್ ಸೌಲಭ್ಯದ ಜತೆಗೆ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net