

ರಾಯಚೂರು ರಾಜ್ಯ ಸರ್ಕಾರ ಘೋಷಿಸಿದ ಭರವಸೆಯಂತೆ, ಎಪ್ರಿಲ್ ೨೦೨೫ರಿಂದ ಪ್ರತಿ ತಿಂಗಳು ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ಹತ್ತು ಸಾವಿರ ರೂ.ಗಳ ಗೌರವಧನವನ್ನು ನೀಡಬೇಕು.
ರೂ.೧೦,೦೦೦ ಹೊರತುಪಡಿಸಿ, ಕಾಂಪೋನೆAಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಇನ್ಸೆಂಟಿವ್ ಕೂಡ ನೀಡಬೇಕು. ಒಂದು ವೇಳೆ ಯಾರಿಗಾದರೂ ಕಾಂಪೋನೆAಟ್ಸ್ ಗಳಿಂದ ಕಡಿಮೆ ಮೊತ್ತದ ಪ್ರೋತ್ಸಾಹ ಧನ ಬಂದಿದ್ದಲ್ಲಿ, ಅಂತಹ ಕಾರ್ಯಕರ್ತೆಯರಿಗೆ, ಸರ್ಕಾರವೇ ವ್ಯತ್ಯಾಸದ ಹಣವನ್ನು ಪಾವತಿಸಿ, ರೂ.೧೦,೦೦೦ ಗ್ಯಾರಂಟಿ ದೊರೆಯುವಂತೆ ಕ್ರಮಕೈಗೊಳ್ಳಲಾಗುವುದು ಎಂಬ ಸರ್ಕಾರದ ಭರವಸೆಯಂತೆ ಕೂಡಲೇ ಆದೇಶ ಹೊರಡಿಸಬೇಕು.
ಆಯವ್ಯಯದಲ್ಲಿ ರಾಜ್ಯದ ಸುಮಾರು ೨,೫೦,೦೦೦ ಅಂಗನವಾಡಿ-ಬಿಸಿಯೂಟ ಕಾರ್ಯ ಕರ್ತೆಯರಿಗೆ ರೂ. ೧೦೦೦ ಹೆಚ್ಚಿಸಿದಂತೆ ೪೨೦೦೦ ಆಶಾ ಕಾರ್ಯಕರ್ತೆಯರಿಗೂ ರೂ. ೧೦೦೦ ಹೆಚ್ಚಿಸಿ, ಇದೇ ಬಜೆಟ್‌ನಲ್ಲಿ ಸೇರಿಸಿ, ಆದೇಶಿಸಬೇಕು. ಆರೋಗ್ಯ ಸಚಿವರ ಸಮ್ಮುಖದಲ್ಲಿ ಇಲಾಖೆಯಿಂದ ಸಂಘದ ಪದಾಽಕಾರಿಗಳೊಂದಿಗೆ ಸಭೆ ಮಾಡಿ, ಸುಗಮಕಾರರನ್ನು ಮತ್ತು ೬೦ ವರ್ಷ ಆದ ಆಶಾ ಕಾರ್ಯಕರ್ತೆಯರನ್ನು ಕೆಲಸವನ್ನು ಕೊನೆಗಾಣಿಸಿರುವುದನ್ನು ಹಿಂತೆಗೆದುಕೊAಡು ಇನ್ನುಳಿದ ಬಹುದಿನಗಳ ಸಮಸ್ಯೆಗಳ ಪರಿಹಾರಕ್ಕೆ ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಈರಮ್ಮ, ಕಾರ್ಯದರ್ಶಿ ರಾಧಾ, ಪ್ರಮುಖರಾದ ಎನ್.ಎಸ್ ವೀರೇಶ, ಅಣ್ಣಪ್ಪ, ಮಹೇಶ ಚೀಕಲಪರ್ವಿ, ದೇವಮ್ಮ, ಪ್ರಭಾ, ಜಯಶ್ರೀ, ಮಲ್ಲಮ್ಮ, ಮಂಜುಳಾ, ಲಕ್ಷ್ಮೀ, ಚೈತ್ರಾ,
ಶಕುಂತಲಾ, ಶೋಭಾ, ಸುಂದರಮ್ಮ, ವಿಜಯಲಕ್ಷ್ಮೀ ಸುಜಾತಾ, ಸುಮಿತ್ರಾ, ಶೈಲಜ, ಶರಣಮ್ಮ, ಈರಮ್ಮ, ಭೀಮಮ್ಮ, ಶ್ರೀದೇವಿ ಸೇರಿದಂತೆ ಇತರರು ಇದ್ದರು.