

ಇಳಕಲ್ಲ(ಗ್ರಾ): ಸರ್ಕಾರ ಕೊಡಮಾಡಿದ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಂಗಳವಾರ ಇಳಕಲ್ಲ- ಹುನಗುಂದ ಅವಳಿ ತಾಲೂಕಿನ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಬಸವೇಶ್ವರ ವೃತ್ತ ಜಮಾಯಿಸಿದ ಸಮಾಜದವರು ಅಲ್ಲಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ಅಲ್ಲಿ ಸಭೆ ನಡೆಸಿದರು. ಬಳಿಕ ತಹಸೀಲ್ದಾರ್ ಸತೀಶ ಕೂಡಲಗಿಗೆ ಮನವಿ ಸಲ್ಲಿಸಿದರು.
ಬಿಸರಹಳ್ಳಿಯ ಮರಳುಸಿದ್ಧೇಶ್ವರ ಮಠದ ಮಳಿಯಯ್ಯಸ್ವಾಮಿಗಳು, ಸೂಡಿಮಠದ ಮರಳಸಿದ್ಧ ಮಹಾಸ್ವಾಮೀಜಿ, ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಮುತ್ತಣ್ಣ ಬೆನ್ನೂರ, ಶ್ರೀಕಾಂತ ಹೊಸಮನಿ, ಚಂದಪ್ಪ ಗುಡಗುಂಟಿ, ಶಾಂತಕುಮಾರ ಗೊರಬಾಳ, ಪುನೀತ್ ಹೊಸಮನಿ, ಬಿ. ಎಚ್. ಮಾದರ, ವಿರೇಶ ಹಿರೇಮನಿ, ಭರಮರೆಡ್ಡಿ ಚಿಂತಕಮಲದಿನ್ನಿ, ಮಂಜುನಾಥ ಮಾದರ, ಹೇಮಂತ ಭೂತ್ನಾಳ್, ಮಹಾಂತೇಶ ಹೊಸಮನಿ, ಮಂಜುನಾಥ ಮಾದರ, ಚಿದಾನಂದ ಹುಬ್ಬಳ್ಳಿ, ಬಿ. ಎಚ್. ಮಾದರ, ಶಾಂತು ಗೊರಬಾಳ, ಶಾಂತೂ ಮೂಕಿ ಸೇರಿ ಹಲವಾರು ಮಹಿಳೆಯರು ಸೇರಿದ್ದರು.