ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ

16adarshkdga1
Published on

ಮಡಿಕೇರಿ: ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಮಡಿಕೇರಿಯ ವಕೀಲರು ನ್ಯಾಯಾಲಯ ಮುಂಭಾಗ ಶುಕ್ರವಾರ ಪ್ರತಿಭಟಿಸಿದರು.


ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ ಮಾತನಾಡಿ, ವಕೀಲರು ನ್ಯಾಯಾಂಗದ ಗೌರವ ಮತ್ತು ಘನತೆ ಯನ್ನು ಕಾಪಾಡಿಕೊಡು ಕಕ್ಷಿದಾರರಿಗೆ ನ್ಯಾಯಾ ಒದಗಿಸುವ ಪವಿತ್ರ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಕೆಲವು ಸಂದರ್ಭದಲ್ಲಿ ತಮ್ಮ ಸಂಸಾರವನ್ನು ಕೂಡ ಮರೆಯುತ್ತಾರೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೆಲಸ ಮಾಡುವಾಗ ಸಾರ್ವಜನಿಕರಿಂದಲೂ, ಪೊಲೀಸರಿಂದಲೂ ದೌರ್ಜನ್ಯ, ಬೆದರಿಕೆ, ಹಲ್ಲೆ ನಡೆಯುತ್ತಿದ್ದು, ಜನ ಸಾಮಾನ್ಯರಿಗೆ ರಕ್ಷಣೆ ಕೊಡುವ ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ. ವಕೀಲರರು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದು ಹೇಳಿದರು.


ವಕೀಲರ ಸಂರಕ್ಷಣೆ ಕಾಯ್ದೆ ೨೦೨೧ನ್ನು ಜಾರಿಗೆ ತಂದು ವಕೀಲರು ನಿರ್ಭಯವಾಗಿ ಕೆಲಸ ಮಾಡುವಂತ ಸನ್ನಿವೇಶ ಸರ್ಕಾರ ಕಲ್ಪಿಸಬೇಕು. ಈಗಿರುವ ಕಾಯ್ದೆ ಜಾರಿಗೆ ತರದಿದ್ದಲ್ಲಿ ಮುಂದಿನ ದಿನಗಳಲ್ಲಿ ವಕೀಲರ ಮೇಲೆ ನಿರಂತರ ದೌರ್ಜನ್ಯ ನಡೆಯುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆ ನಾವೆಲ್ಲರೂ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.


ಬೆಳಗಾವಿಯಲ್ಲಿ ನಡೆಯುವ ವಿಧಾನ ಸಭಾ ಅಧಿವೇಶನದಲ್ಲಿ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಮಂಡಿಸಬೇಕು. ಕಾನೂನನ್ನು ಜಾರಿಗೆ ತಂದು ವಕೀಲ ಸಮುದಾಯಕ್ಕೆ ನ್ಯಾಯಾ ಒದಗಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಯವರಿಗೆ ಕೊಡಗು ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.


ಈ ಸಂದರ್ಭ ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ.ಅರುಣ್ ಕುಮಾರ್, ಕೆ.ಎಸ್.ಉಪಾಧ್ಯಕ್ಷ ರತನ್ ತಮ್ಮಯ್ಯ, ಜಂಟಿ ಕಾರ್ಯದರ್ಶಿ ಎಂ.ವಿ.ಸಂಜಯ್ ರಾಜ್, ಖಜಾಂಚಿ ಬಿ.ಸಿ.ದೇವಿಪ್ರಸಾದ್, ಪದಾಧಿಕಾರಿಗಳಾದ ಡಿ.ಕೆ.ರಾಜೇಶ್, ಪಿ.ಆರ್.ಚಂದನ್, ಡಿ.ಎನ್.ಡೊಮಿನಿಕ್, ಭಾನುಪ್ರಕಾಶ್ ಹಾಗೂ ವಕೀಲರ ಸಂಘದ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net