

ರಾಯಚೂರು ಭೂಮಿ ಮತ್ತು ವಸತಿ ವಂಚಿತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ -É.೧೦ ರಂದು ಭೂಮಿ ಮತ್ತು ವಸತಿ ಹಕ್ಕು ವಚಿಚಿತ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಜಿಲ್ಲಾಽಕಾರಿಗಳ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆಂದು ಸಮಿತಿ ಸದಸ್ಯಅಂಜಿನೇಯ್ಯ ಕುರುಬದೊಡ್ಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾನೂನಿನ ಹೆಸರಿನಲ್ಲಿ ಭೂಮಿ ಮಂಜೂರಾತಿ ನೀಡದೇ ಅರ್ಜಿಗಳನ್ನು ಮಾನ್ಯ ಮಾಡುತ್ತಿಲ್ಲ, ಇದಕ್ಕೆ ಹಲವಾರು ರೀತಿಯ ಕಾರಣಗಳನ್ನು ನೀಡುತ್ತಿದ್ದು, ಕೃಷಿ ಯೋಗವಲ್ಲದ ಭೂಮಿ,ಅರಣ್ಯ,ಖರಾಬ್, ಅಖರಾಬ್, ಬಖರಾಬ್,ರಾಳಗುಡ್ಡ ಅರಣ್ಯದ ಹೆಸರಿನಲ್ಲಿರುವ ಭೂಮಿಗಳು, ಮಲೆನಾಡಿನಲ್ಲಿ ಕರೆಯಲ್ಪಡುವ ಸೋಪ್ಪಿನ ಬೆಟ್ಟ (ಊರುಗುಪ್ಪೆ) ನಡುತೋಪು, ಭಾಣೆ, ದೇವರಕಾಡು ಹೆಸರಿನಲ್ಲಿರುವ ಭೂಮಿಗಳು ಇವೆ. ಇದೇ ಭೂಮಿಯನ್ನು ಭೂ ರಹಿರ ಜನರನ್ನು ಕಷ್ಟಪಟ್ಟು ಹಸನುಗೊಳಿಸಿಕೊಂಡು ಬದುಕು ಕಟ್ಟಿಕೊಂಡಿದಲ್ಲದೆ ಎಲ್ಲರಿಗೂ ಆಹಾರದ ಉತ್ಪಾದನೆ ಮಾಡುತ್ತಿದ್ದಾರೆ. ಆದರೆ ಅರ್ಜಿಗಳ ತಿರಸ್ಕಾರ ಎಂಬುದು ಜನರ ನಿದ್ದೆ ಕೆಡಸಿದಯಲ್ಲದೆ ಜನರ ಬದುಕುವ ಹಕ್ಕನ್ನೇ ತಿರಸ್ಕರಿಸಿದಂತಾಗಿದೆ.
ಅರಣ್ಯ ಭೂಮಿಗಳಲ್ಲಿ ಅರ್ಜಿ ಸಲ್ಲಿಸಿ ಅರಣ್ಯ ಹಕ್ಕು ಕಾಯ್ದೆಯನ್ವಯ ಅರ್ಜಿಗಳನ್ನು ಮಾನ್ಯ ಮಾಡಿ ಭೂಮಿ ಮಂಜುರಾತಿ ನೀಡಬೇಕು, ಅರಣ್ಯ ಇಲಾಖೆ ಕಿರುಕುಳ ತಪ್ಪಬೇಕು, ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವ ಬಹುತೇಕರು ಭೂ ರಹಿತರೇ ಆಗಿದ್ದಾರೆ. ಅದರಲ್ಲೂ ಪ.ಜÁತಿ, ಪ.ಪಂ. ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರುಗಳಿಗೆ ಸಾಮಾಜಿಕ ನ್ಯಾಯವಾಗಿಯೂ ಈ ಭೂಮಿ ಮಂಜೂರಾತಿ ನೀಡುವ ಮೂಲಕ ಸಂವಿಧಾನದ ಆಸಯಗಲನ್ನು ಎತ್ತಿಹಿಡಿಯಬೇಕಾದ್ದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಷಣ್ಮುಕಪ್ಪ ಗಂಟಿ,ರAಗಾರೆಡ್ಡಿ,ಕೃಷ್ಣ ಪ್ರಸಾದ್ ಇದ್ದರು.