ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

AMT 20-1
ಆಲಮಟ್ಟಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಜಯಕರ್ನಾಟಕ ಸಂಘಟನೆ ತಾಳಿಕೋಟೆ ತಾಲೂಕು ಅಧ್ಯಕ್ಷ ಬಸವರಾಜ ಸಿಂಗನಹಳ್ಳಿ, ಚನ್ನನಗೌಡ ಪಾಟೀಲ, ಮಲ್ಲನಗೌಡ ಪಾಟೀಲ ಇತರರಿದ್ದರು.
Published on

ಆಲಮಟ್ಟಿ : ಚಿಮ್ಮಲಗಿ ಏತ ನೀರಾವರಿ ಯೋಜನೆ ಪೂರ್ವ ಕಾಲುವೆಯ ೯೧ಕಿ.ಮೀ.ದಲ್ಲಿರುವ ಎಂಬ್ಯಾಕಮೆAಟ್ ದುರಸ್ತಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜಯಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಶ್ರೀರಾಮಲಿಂಗೇಶ್ವರ ದೇವಸ್ಥಾನದಿಂದ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರ ಕಚೇರಿವರೆಗೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮಟೆ ಬಾರಿಸುತ್ತ ತೆರಳಿದ ಪ್ರತಿಭಟನಕಾರರು ಅಲ್ಲಿ ಧರಣಿ ನಡೆಸಿದರು.

ಜಯಕರ್ನಾಟಕ ಸಂಘಟನೆಯ ತಾಳಿಕೋಟೆ ತಾಲೂಕು ಅಧ್ಯಕ್ಷ ಬಸವರಾಜ ಸಿಂಗನಹಳ್ಳಿ ಮಾತನಾಡಿ, ಚಿಮ್ಮಲಗಿ ಏತ ನೀರಾವರಿ ಯೋಜನೆ ಪೂರ್ವ ಕಾಲುವೆಯ ೯೦-೯೧ನೇ ಕಿ.ಮೀ.ದಲ್ಲಿ ನಿರ್ಮಿಸಲಾಗಿರುವ ಎಂಬ್ಯಾಕಮೆಂಟಿನಲ್ಲಿ ಕಾಲುವೆ ನೀರು ಸೋರಿಕೆಯಾಗಿ ಅಕ್ಕಪಕ್ಕದ ಜಮೀನುಗಳು ಹಾಳಾಗುತ್ತಿವೆ. ಕೂಡಲೇ ಅದನ್ನು ದುರಸ್ತಿಗೊಳಿಸಿ, ಹಾಳಾದ ಜಮೀನುಗಳಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಸ್ಥಳಕ್ಕೆ ಅಣೆಕಟ್ಟು ವೃತ್ತ ಅಧೀಕ್ಷಕ ಅಭಿಯಂತರ ಡಿ.ಬಸವರಾಜ ಅವರೊಂದಿಗೆ ಮುಖ್ಯ ಅಭಿಯಂತರ ಎಚ್.ಸುರೇಶ ಭೇಟಿ ನೀಡಿ ಮಾತನಾಡಿ, ಕಾಮಗಾರಿ ಶರವೇಗದಲ್ಲಿ ನಡೆದಿರುವ ವೇಳೆ ಕೆಲ ರೈತರಿಂದ ಅಡಚಣೆಯಾಗಿ ವಿಳಂಬವಾಗುವಂತಾಗಿತ್ತು. ರೈತರ ಒಪ್ಪಿಗೆಯೊಂದಿಗೆ ಕಾಮಗಾರಿ ಆರಂಭಿಸಲಾಗಿದೆ. ಕೆಳ ಹಂತದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಚನ್ನನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಯಮನೂರಿ ಸೌದಿ, ಮುತ್ತು ಪಾರತಗೌಡ, ರಾಮನಗೌಡ ನಡಹಳ್ಳಿ, ಶ್ರೀಶೈಲ ಹಿರೇಮಠ, ನಿಂಗಣ್ಣ ನಾಗೂರ, ಬಸವರಾಜ ಹಂಚಲಿ, ಪರಮಾನಂದ ಬನ್ನಿಗಿಡ, ಹನಮಗೌಡ ಸಾಸನೂರ, ಶಿವಣ್ಣ ನಾಗೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net