

ದೇವರಹಿಪ್ಪರಗಿ:ದಲಿತರ ಭೂಮಿ, ವಸತಿ ಹಕ್ಕು ಸಹಿತ ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ದಲಿತ ಸಂರ್ಷ ಸಮಿತಿ ಪದಾ-ಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಪ್ರಕಾಶ ಸಿಂದಗಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣಕ್ಕೆ ಶುಕ್ರವಾರ ಆಗಮಿಸಿದ ದಲಿತ ಸಂರ್ಷ ಸಮಿತಿ ಪದಾಧಿಕಾರಿಗಳು ಭೂಮಿ ಮಂಜೂರಾತಿಗೆ ಆಗ್ರಹಿಸಿ 2 ಗಂಟೆಗಳವರೆಗೆ ಪ್ರತಿಭಟನಾ ಧರಣಿ ಕೈಗೊಂಡರು.
ತಾಲೂಕು ಪ್ರಧಾನ ಸಂಚಾಲಕ ಸಾಯಬಣ್ಣ ದಳಪತಿ ಮಾತನಾಡಿ, ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸರ್ಕಾರಗಳು ಕೈಗಾರಿಕೆಗಳ ಸ್ಥಾಪನೆ ನೆಪದಲ್ಲಿ ವಿದೇಶಿ ಬಂಡವಾಳಗಾರರಿಗಾಗಿ ಸ್ವಾಧಿನಪಡಿಸಿಕೊಳ್ಳುತ್ತೇವೆ. ಇದು ದಲಿತರನ್ನು ಭೂಮಿಯಿಂದ ಕೇವಲ ಹೊರದಬ್ಬುವ ಕುತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ, ವರ್ಗ, ಭೂರಹಿತ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿ ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕು. ವಜಾಗೊಳಿಸಿರುವ ಸಾಗುವಳಿ ಅರ್ಜಿಗಳನ್ನು ಮರುಪರಿಶೀಲಿಸಬೇಕು.
ಎಸ್ಸಿಎಸ್ಪಿ&ಟಿಎಸ್ಪಿ ನಿರ್ವಹಣೆಗೆ ಪ್ರತ್ಯೇಕ ನಿರ್ದೇಶನಾಲಯ ಅಥವಾ ಏಕಗವಾ ಯೋಜನೆ ವ್ಯವಸ್ಥೆ ಜಾರಿಗೊಳಿಸಬೇಕು. ಸಮಾಜ ಕಲ್ಯಾಣ ಇಲಾಖೆಯಡಿಯ ವಿದ್ಯಾರ್ಥಿ ನಿಲಯಗಳನ್ನು ಉನ್ನತಿಕರಣಗೊಳಿಸಿ, ನಿಗದಿತ ಅವಧಿಯೊಳಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ತಾಲೂಕು ಸಂಟನಾ ಸಂಚಾಲಕ ಸಂತೋಷ ಯಾಳವಾರ, ಅನೀಲ ತಳಕೇರಿ, ಪ್ರಭು ಬಮ್ಮನಜೋಗಿ, ಸದಾಶಿವ ಚಟ್ಟರಕಿ, ಸುದೀಪ ದೊಡಮನಿ, ಪ್ರದಿಪ ಕಟ್ಟಿಮನಿ, ಪ್ರಕಾಶ ಹರಿಜನ, ಪ್ರಶಾಂತ ದೊಡಮನಿ ಇದ್ದರು.
ದೇವರಹಿಪ್ಪರಗಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂರ್ಷ ಸಮಿತಿ ಪದಾಧಿ-ಕಾರಿಗಳು ದಲಿತರ ಭೂಮಿ, ವಸತಿ ಹಕ್ಕು ಸಹಿತ ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನಾ ಧರಣಿ ಕೈಗೊಂಡು ತಹಸೀಲ್ದಾರ್ ಪ್ರಕಾಶ ಸಿಂದಗಿಗೆ ಮನವಿ ಸಲ್ಲಿಸಿದರು.