ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಪ್ರತಿಭಟನೆ

Protest demanding fulfillment of various demands
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಟನೆಗಳ ಪದಾಧಿಕಾರಿಗಳು ವಿಜಯಪುರದ ಜಿಪಂ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಅಣ್ಣಾರಾಯ ಈಳಗೇರ, ಲಕ್ಷ$್ಮಣ ಹಂದ್ರಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ಜಿಲ್ಲೆಯಲ್ಲಿ ನರೇಗಾ ಯೋಜನೆ ಸಮರ್ಪಕ ಜಾರಿಗೊಳಿಸುವ ಜತೆಗೆ ಕಾರ್ಮಿಕರಿಗೆ ಸತತ 100 ದಿನಗಳ ಕೆಲಸ ನೀಡುವಂತೆ ಒತ್ತಾಯಿಸಿ ವಿವಿಧ ಪ್ರಗತಿಪರ ಸಂಟನೆಗಳ ಪದಾಧಿಕಾರಿಗಳು ಶುಕ್ರವಾರ ಜಿ.ಪಂ. ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಜಿಪಂ ಸಿಇಒ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಪ್ರಾಂತ ರೈತ ಸಂದ ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರಿ ಮಾತನಾಡಿ, ರಾಜ್ಯದಲ್ಲಿಯೇ ಅತೀ ಹೆಚ್ಚು ಕೂಲಿ ಕೆಲಸ ಅರಸಿ ವಲಸೆ ಹೋಗುವ ಜಿಲ್ಲೆ ಎಂದರೆ ವಿಜಯಪುರ. ಬಡವರ ಪಾಲಿಗೆ ವರದಾನವಾಗಬೇಕಿದ್ದ ನರೇಗಾ ಯೋಜನೆಯು ಅಧಿಕಾರಿಗಳ ರ್ನಿಲಕ್ಷದಿಂದ ಸದ್ಯ ದಾರಿ ತಪ್ಪುತ್ತಿದೆ.

ಜಿಲ್ಲೆಯ ಹಲವು ಪಂಚಾಯಿತಿಗಳಲ್ಲಿ ಫಾಮ್​ರ್ ನಂ. 6 ಭರ್ತಿ ಮಾಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರೂ ಕೆಲಸ ಕೊಡುತ್ತಿಲ್ಲ. ಕೆಳ ಹಂತದ ಅಧಿಕಾರಿಗಳು ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡದೆ ಅದರ ಮಹತ್ವ ಹಾಳು ಮಾಡುತ್ತಿದ್ದು, ಅದಕ್ಕೇ ನೇರವಾಗಿ ಜಿಪಂ ಸಿಇಒ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನವಾದಿ ಮಹಿಳಾ ಸಂಟನೆಯ ಸುರೇಖಾ ರಜಪೂತ ಮಾತನಾಡಿ, ಮೇ 1 ರಿಂದ ಸತತವಾಗಿ ಕೆಲಸ ಕೊಡಬೇಕು.

ಒಂದೇ ಬಾರಿಗೆ ಎನ್​ಎಂಆರ್​ ಫಾಮ್​ರ್ ಕೊಡಬೇಕು. ಈಗಾಗಲೆ ಒಂಬಡ್ಸ್​ಮನ್​ ನಿರುದ್ಯೋಗ ಭತ್ಯೆಯ ಆದೇಶವನ್ನು ಜಾರಿಮಾಡಿ ನಿರುದ್ಯೋಗ ಭರ್ತಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಕೃಷಿ ಕೂಲಿ ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ದಾವಲಸಾಬ ನದಾಫ್​ ಹಾಗೂ ರಮೇಶ ಸಾಸಬಾಳ ಮಾತನಾಡಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ$್ಮಣ ಹಂದ್ರಾಳ, ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಈರಣ್ಣ ಬೆಳ್ಳುಂಡಗಿ, ಬಿಸಿಎಂ ಹಾಸ್ಟೆಲ್​ ನೌಕರರ ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ, ಶಾಂತಪ್ಪ ಹೊಸಮನಿ, ಅನ್ನಪೂರ್ಣ, ಬಾಬು ರಾಠೋಡ, ಶ್ರೀಮಂತ ರಾಠೋಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net