

ಶಿಗ್ಗಾಂವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಾರ್ಮಿಕರ ಹಿತರಕ್ಷಣೆ ಮತ್ತು ಜಾಗೃತ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಪಟ್ಟಣದ ಜಯನಗರದಲ್ಲಿನ ಹಿಟ್ಟಿನ ಮತ್ತು ಖಾರಾ ಕುಟ್ಟುವ ಗಿರಣಿ ಆರಂಭಕ್ಕೆ ಪರವಾನಗಿ ನೀಡಬೇಕು. ರದ್ದುಪಡಿಸಿದ ಕ್ರಮವನ್ನು ಪ್ರಶ್ನಿಸಿದ ಜನರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಪುರಸಭೆ ಮುಖ್ಯಾಧಿಕಾರಿ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ವಂತಿಗೆ ಪಡೆದ ಫಲಾನುಭವಿಗಳಿಗೆ ಜಿ+1 ಮನೆಗಳನ್ನು ತಕ್ಷಣ ವಿತರಿಸಬೇಕು. ಪಿಎಂ ವಿಶ್ವಕರ್ಮ ಯೋಜನೆಯಡಿ ನೋಂದಾಯಿತ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಬೇಕು. ಬ್ಯಾಂಕ್ ಸಾಲ ಸೌಲಭ್ಯಗಳು ಕಲ್ಪಿಸಬೇಕು.
ಶಿಗ್ಗಾಂವಿ ತಾಲೂಕಿನಲ್ಲಿ ಅಸಂಘಟಿತ ವರ್ಗಗಳಾದ ಹಮಾಲರು, ಚಿಂದಿ ಆಯುವವರು, ಬೀದಿ ವ್ಯಾಪಾರಸ್ಥರು, ಆಟೋ, ಕಾರು ಚಾಲಕರು, ಟೈಲರ್‌ಗಳಿಗೆ ಗುರುತಿನ ಚೀಟಿ ವಿತರಿಸಬೇಕು. ಕೆಲವರಿಗೆ ವಿತರಣೆಯಾದರೂ ಸೌಲಭ್ಯ ಸಿಕ್ಕಿಲ್ಲ. ಸಮಸ್ಯೆಗೆ ತ್ವರಿತವಾಗಿ ಪರಿಹಾರ ನೀಡಬೇಕು ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವೇದಿಕೆ ತಾಲೂಕು ಅಧ್ಯಕ್ಷ ಫಕೀರೇಶ ಶಿಗ್ಗಾಂವಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಮಂಜುನಾಥ ಮಿರ್ಜಿ, ಸುರೇಶ ಹರಿಜನ, ಪ್ರದೀಪ ಹುಲಿಕಟ್ಟಿ, ದುರಗಪ್ಪ ವಡ್ದರ, ಅಶ್ವಿನಿ ಜಾಧವ, ರೂಪಾ ಗೌಳಿ, ಮುತ್ತು ಗಾಡದ, ಮಂಜುಳಾ ಹಾನಗಲ್, ವಿಜಯಕುಮಾರ ಕಳ್ಳಿಮನಿ, ಮಕ್ಬುಲ್ ಯಲ್ಲಾಪುರ, ಸಂತೋಷ ಕಟ್ಟಿಮನಿ, ನಿಂಗಪ್ಪ ಬೆಂಚಳ್ಳಿ, ದ್ಯಾಮವ್ವ ಹುಲಿಕೊಪ್ಪ, ಲಕ್ಷ್ಮಿ ಕುನ್ನೂರ, ಗೌಸ್ ಅಸಿನಮಟ್ಟಿ, ಕುಶಾಲ ಕಾಳೆ, ಆದರ್ಶ ಕಲಾಲ, ಪರಸಪ್ಪ ಈಳಿಗೇರೆ, ರಫಿ ಕಾರ್ಯಕೊಪ್ಪ, ಸಂತೋಷಕುಮಾರ ಕಟ್ಟಿಮನಿ, ಬಸವರಾಜ ಜಾಧವ, ಗಂಗವ್ವ ಹೊತನಹಳ್ಳಿ, ಗಂಗವ್ವ ಸಿದ್ದಾಪುರ, ಭಾರತಿ ಪೂಜಾರಿ, ಚಂದ್ರಮ್ಮ ಇಂಗಳಗಿ, ರೇಣುಕಾ ಸಿದ್ದಾಪುರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.