ಉಚಿತ ಮದ್ಯ ನೀಡುವಂತೆ ಆಗ್ರಹಿಸಿ ವಿನೂತನ ಪ್ರತಿಭಟನೆ!

udp-11-madya
Published on

ಉಡುಪಿ: ಮದ್ಯದರ ವಿಪರೀತ ಏರಿಕೆ ಸಲ್ಲದು. ಒಂದೋ ಮದ್ಯ ನಿಷೇಧ ಮಾಡಬೇಕು. ಇಲ್ಲದಿದ್ದರೆ ಬೆಳಿಗ್ಗೆ ಮತ್ತು ಸಾಯಂಕಾಲ ಉಚಿತ ಮದ್ಯ ನೀಡಬೇಕು ಎಂದು ಮದ್ಯ ಪ್ರಿಯರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

ಚಿತ್ತರಂಜನ್ ಸರ್ಕಲ್ ಸಮೀಪ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಮಂಗಳವಾರ ಮದ್ಯದ ಬೆಲೆ ಏರಿಕೆ ವಿರುದ್ಧ ನಡೆದ ವಿನೂತನ ಪ್ರತಿಭಟನೆ ನಡೆಯಿತು. ನಾವು ಮದ್ಯ ಕುಡಿದರಷ್ಟೇ ಸರ್ಕಾರ ನಡೆಯುತ್ತದೆ. ಆದರೆ, ಮದ್ಯದ ದರ ಹೆಚ್ಚಿಸಲಾಗುತ್ತಿದೆ. ಇದ್ಯಾವ ನ್ಯಾಯ ಎಂಬುದಾಗಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮದ್ಯದ ಬೆಲೆ ಏರಿಕೆಯಿಂದ ಕೂಲಿ ಕಾರ್ಮಿಕರು ಮದ್ಯ ಸೇವಿಸಲು ಅಸಹಾಯಕ ಪರಿಸ್ಥಿತಿ ಎದುರಿಸುವಂತಾಗಿದೆ. ಸರ್ಕಾರ ಉಚಿತ ಭಾಗ್ಯಗಳನ್ನು ನೀಡಿದಂತೆ ಕಾರ್ಮಿಕ ವರ್ಗದವರಿಗೆ ಉಚಿತ ಮದ್ಯ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ನಿತ್ಯಾನಂದ ಒಳಕಾಡು ಒತ್ತಾಯಿಸಿದರು.

ನಾಡಿನ ಬೊಕ್ಕಸಕ್ಕೆ ಕಾಣಿಕೆ ನೀಡುವ ಕುಡುಕರು ದೇವರ ಸಮಾನ ಎಂದು ಮದ್ಯಪ್ರಿಯರನ್ನು (ಕುಡುಕರಿಗೆ) ತಮಟೆ ವಾದ್ಯದ ಹಿನ್ನೆಲೆಯಲ್ಲಿ ಮಲ್ಲಿಗೆ ಹಾರ ಹಾಕಿ, ಆರತಿ ಬೆಳಗಿ ಗೌರವಿಸಲಾಯಿತು. ಅವರ ಮುಂದೆ ದೊಡ್ಡ ಮದ್ಯದ ಬಾಟಲಿಯೊಂದನ್ನು ಇರಿಸಲಾಗಿತ್ತು. ಈ ವಿಶಿಷ್ಟ ಪ್ರತಿಭಟನೆ ನೆರೆದ ಸಾರ್ವಜನಿಕರಿಗೆ ಮನೋರಂಜನೆ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net