ಚುನಾವಣೆಗೆ ಒತ್ತಾಯಿಸಿ ಪ್ರತಿಭಟನೆ

ಚುನಾವಣೆಗೆ ಒತ್ತಾಯಿಸಿ ಪ್ರತಿಭಟನೆ
Published on

ಗೋಣಿಕೊಪ್ಪ: ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ರಚನೆಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಫೆಬ್ರವರಿ 16ರಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೇಚೆಟ್ಟಿರ ಅರುಣ್ ತಿಳಿಸಿದರು.

ಸಂಘವು 2700 ಸದಸ್ಯರನ್ನು ಹೊಂದಿದ್ದು, ಬೆಳೆಗಾರರಿಗೆ ಉತ್ತಮ ಸೇವೆ ಒದಗಿಸುತ್ತಾ ಬಂದಿದೆ. ಕೆಲವು ವ್ಯಕ್ತಿಗಳು ಚುನಾವಣೆ ನಡೆಸದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸಂಘದ ಆಡಳಿತ ಮಂಡಳಿ ಅವಧಿಯೂ 2023ರ ಅಕ್ಟೋಬರ್ ತಿಂಗಳಿಗೆ ಮುಗಿದಿದ್ದು, ಇದುವರೆಗೆ ಚುನಾವಣೆ ನಡೆಸಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಸೋಲು ಕಂಡವರು ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಸಹಕಾರ ಸಂಘದ ವಿರುದ್ಧ ಆರೋಪಗಳ ಮಾಡಲಾಗುತ್ತಿದೆ. ಶಾಸಕರು ರೈತರ ಹಿತದೃಷ್ಟಿಯಿಂದ ಸಹಕಾರ ಸಂಘಕ್ಕೆ ಚುನಾವಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಪ್ಪಣಮಾಡ ಗಣೇಶ್, ಚಂದ್ರ ಪ್ರಕಾಶ್, ಸಿ.ಡಿ.ತಿಮ್ಮಯ್ಯ, ಸಿ.ಬಿ.ನಂಜಪ್ಪ, ಕೆ.ಕೆ.ಮಂದಣ್ಣ, ಕೆ.ಎನ್.ಅಪ್ಪಣ್ಣ, ಬಿ.ಎನ್.ಸುನೀಲ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net