ಟಿಪ್ಪರ್ ಸಂಚಾರಕ್ಕೆ ಕಡಿವಾಣ ಹಾಕಲು ಆಗ್ರಹಿಸಿ ಪ್ರತಿಭಟನೆ

Sirahatti
Published on

ಶಿರಹಟ್ಟಿ: ಓವರ್‌ಲೋಡ ಟಿಪ್ಪರ್ ಸಂಚಾರಕ್ಕೆ ಕಡಿವಾಣ ಹಾಕಬೇಕು ಮತ್ತು ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ತಾಲೂಕು ಘಟಕದಿಂದ ಮಾಗಡಿ ಕ್ರಾಸ್ ಬಳಿ ಲಕ್ಷ್ಮೇಶ್ವರ-ಗದಗ ವಾಹನ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸಂಘದ ಕಾರ್ಯದರ್ಶಿ ರಮೇಶ ಕೋಳಿವಾಡ ಮಾತನಾಡಿ, ಮಳೆ ಕೊರತೆಯಿಂದ ಮುಂಗಾರು ಹಂಗಾಮಿನ ಬೆಳೆ ಬಾರದೇ ರೈತರು ಕಂಗಾಲಾಗಿದ್ದಾರೆ. ಕೃಷಿ ಅಧಿಕಾರಿ ಹಾಗೂ ತಹಸೀಲ್ದಾರರು ಬೆಳೆ ನಷ್ಟ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಯೋಗ್ಯ ಪರಿಹಾರ ದೊರಕಿಸಿಕೊಡಬೇಕು.

ಗ್ರಾಮದ ಸುತ್ತಮುತ್ತಲಿನ ಕ್ರಷರ್‌ಗಳಿಂದ ಖಡಿ, ಎಂ. ಸ್ಯಾಂಡ್ ತುಂಬಿಕೊಂಡು ದಿನವಿಡಿ ಟಿಪ್ಪರ್‌ಗಳು ಗ್ರಾಮದಲ್ಲಿ ಸಂಚರಿಸುತ್ತಿವೆ. ಜನ-ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಟಿಪ್ಪರ್‌ಗಳಿಗೆ ಪರ್ಯಾಯ ಮಾರ್ಗ ಕಲ್ಪಿಸುವಂತೆ ಗ್ರಾಪಂಗೆ ಹಾಗೂ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕಾಗಮಿಸಿದ ಪಿಎಸ್‌ಐ ಈರಪ್ಪ ರಿತ್ತಿ ಅವರು ಪ್ರತಿಭಟನಾಕಾರ ಮನವೊಲಿಸಿದರು. ರೈತರಿಮದ ಮನವಿ ಸ್ವೀಕರಿಸಿ ಕೂಡಲೇ ತಹಸೀಲ್ದಾರ್ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಈಶ್ವರಪ್ಪ ಮಲ್ಲಿಗವಾಡ, ಉಡಚಪ್ಪ ಪೂಜಾರ, ಮಾದೇವಪ್ಪ ಗದಗ, ಪರ್ವತಗೌಡ ಪಾಟೀಲ, ಈರಣ್ಣ ಲಕ್ಕುಂಡಿ, ದೇವಪ್ಪ ಬಾರಕೇರ, ಪರಶುರಾಮ ಡೋಣಿ, ಚೆನ್ನಪ್ಪ ವರವಿ, ಲೋಕಪ್ಪ ಪೂಜಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net