ನಿರಂತರ ವಿದ್ಯುತ್ ಪೂರೈಸಲು ಆಗ್ರಹಿಸಿ ಪ್ರತಿಭಟನೆ

21 TDL PROTEST
ತೇರದಾಳ ಪಟ್ಟಣದ ನೋಂದಣಿ ಕಚೇರಿ ಮುಂಭಾಗ ನೂರಾರು ರೈತರು ಪ್ರತಿಭಟಿಸಿದರು. ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಶಾಸಕ ಸಿದ್ದು ಸವದಿ, ಮುಖಂಡ ಸಿದ್ದು ಕೊಣ್ಣೂರ ರೈತರಿಗೆ ಮನವೊಲಿಸಿದರು.
Published on

ತೇರದಾಳ: ಕೃಷ್ಣಾ ತೀರದ ರೈತರಿಗೆ ಪ್ರತಿದಿನ ಏಳು ಗಂಟೆಗಳ ಪರ್ಯಂತರ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಸೋಮವಾರ ಜಮಖಂಡಿ- ಕಾಗವಾಡ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆಗೆ ಮುಂದಾದ ರೈತರನ್ನು ಪೊಲೀಸರು ತಡೆದರು.

ಸ್ಥಳಕ್ಕೆ ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಶಾಸಕ ಸಿದ್ದು ಸವದಿ, ಮುಖಂಡ ಸಿದ್ದು ಕೊಣ್ಣೂರ ಆಗಮಿಸಿ, ರೈತರನ್ನು ಮನವೋಲಿಸುವ ಪ್ರಯತ್ನಿಸಿದರಲ್ಲದೆ, ಉಪವಿಭಾಗಾಧಿಕಾರಿಯೊಂದಿಗೂ ದೂರವಾಣಿಯಲ್ಲಿ ಮಾತನಾಡಿದರು. ಮಂಗಳವಾರ ಮತ್ತು ಬುಧವಾರ 6 ಗಂಟೆ ವಿದ್ಯುತ್ ಪೂರೈಸಲಾಗುವುದು. ಗುರುವಾರವರೆಗೆ ಮಳೆಯಾದರೆ ಅಥವಾ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಹರಿದು ಬಂದರೆ ನಿತ್ಯ 6 ಗಂಟೆ ವಿದ್ಯುತ್ ಪೂರೈಸಲಾಗುವುದು. ಇಲ್ಲದಿದ್ದರೆ ಗುರುವಾರದಿಂದ ನಿತ್ಯ 4 ಗಂಟೆ ವಿದ್ಯುತ್ ಪೂರೈಸುವುದಾಗಿ ಎಸಿ ಅವರು ನೀಡಿದ ಮಾಹಿತಿಯನ್ನು ತಹಸೀಲ್ದಾರ್ ವಿಜಯಕುಮಾರ ಕಡಕೋಳ ರೈತರಿಗೆ ತಿಳಿಸಿದರು.

ಶಾಸಕ ಸಿದ್ದು ಸವದಿ, ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಅಧಿಕಾರಿಗಳು ನೀಡಿದ ಭರವಸೆ ತಪ್ಪಿದರೆ ನಿಮ್ಮ ಜತೆ ನಾವೂ ಹೋರಾಟದಲ್ಲಿ ಭಾಗವಹಿಸುವುದಾಗಿ ತಿಳಿಸಿದಾಗ ರೈತರು ಪ್ರತಿಭಟನೆ ಕೈ ಬಿಟ್ಟರು. ಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net