ನೇಮಕಾತಿ ರದ್ದತಿಗೆ ಆಗ್ರಹಿಸಿ ಧರಣಿ

10 NRD 6
Published on

ನರಗುಂದ: ತಾಲೂಕಿನ ಸುರಕೋಡ ಅಂಗನವಾಡಿ ಕೇಂದ್ರ ಸಂಖ್ಯೆ 38ಕ್ಕೆ ಆದೇಶ ಉಲ್ಲಂಘಿಸಿ ಕಾರ್ಯಕರ್ತೆಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಕರ್ನಾಟಕ ಮಾದಿಗ ಯುವಸೇನೆ ಸಂಘಟನೆ ಸದಸ್ಯರು ಪಟ್ಟಣದ ಮಿನಿವಿಧಾನಸೌಧ, ಸಿಡಿಪಿಒ ಕಚೇರಿ ಆವರಣದಲ್ಲಿ ಸೋಮವಾರದಿಂದ ಧರಣಿ ಆರಂಭಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುರಕೋಡದ ಅಂಗನವಾಡಿ ಕಾರ್ಯಕರ್ತೆ ನೇಮಕಾತಿಗೆ 2024ರ ಆಗಸ್ಟ್ 20ರಂದು ಅಧಿಸೂಚನೆೆ ಹೊರಡಿಸಿದೆ. ಶೇ.40ರಷ್ಟು ಎಸ್ಸಿ/ಎಸ್ಟಿ ಜನಾಂಗದವರು ವಾಸಿಸುವ ಬಡಾವಣೆಗಳಲ್ಲಿನ ಅಂಗನವಾಡಿ ಕೇಂದ್ರಕ್ಕೆ ಎಸ್ಸಿ,ಎಸ್ಟಿ ಅಭ್ಯರ್ಥಿಗಳನ್ನೇ ನೇಮಕಾತಿ ಮಾಡಿಕೊಳ್ಳಬೇಕೆಂದು ನಿಯಮವಿದೆ. 38 ಕೇಂದ್ರದಲ್ಲಿ ಈ ನಿಯಮ ಉಲ್ಲಂಘನೆಯಾಗಿದೆ. ಹೀಗಾಗಿ ನೇಮಕಾತಿ ರದ್ದುಪಡಿಸಬೇಕು ಎಂದರು. ಶಾಶ್ವತ ಪರಿಹಾರ ದೊರೆಯುವವರೆಗೆ ಧರಣಿ ಕೈಬಿಡುವುದಿಲ್ಲವೆಂದು ಪ್ರತಿಭಟನೆಕಾರರು ಅಹೋರಾತ್ರಿ ಧರಣಿ ಮುಂದುವರಿಸಿದ್ದರು. ಮುತ್ತು ಸುರಕೋಡ, ಹನುಮಂತ ಮಾದರ, ಯಲ್ಲಪ್ಪ ಹೊಸಮನಿ, ಸುರೇಶ ಬಾಬರ, ಮತ್ತು ಪೂಜಾರ, ವಿಠಲ ಮಾದರ, ಶಿವಾನಂದ ಸುರಕೋಡ, ಶಿವಾನಂದ ತಳವಾರ, ಶಿವು ಪೂಜಾರ, ಶಿವಾನಂದ ಬನಹಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net