ಕಾಯಂ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

JYD-STRIKE
Published on

ಜೊಯಿಡಾ: ಅವುರ್ಲಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಿಸಬೇಕು ಎಂದು ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು ಮತ್ತು ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಕಾಯಂ ಶಿಕ್ಷಕರನ್ನು ನಿಯೋಜಿಸುವಂತೆ ಬಿಇಒ ಹಾಗೂ ತಹಸೀಲ್ದಾರ್‌ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಂಜುನಾಥ ಮನ್ನೋಳಿ, ಕಾಯಂ ಶಿಕ್ಷಕರ ಕೊರತೆ ಇದೆ ಎಂದು ಬಿಇಒ ತಿಳಿಸಿದ್ದಾರೆ. ಬೇರೆ ಶಾಲೆಯಿಂದ ಶಿಕ್ಷಕರನ್ನು ನಿಯೋಜಿಸುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸಲಾಗುವುದು ಎಂದರು.

ಕಾರ್ಯಾಲಯದ ಎದುರೇ ಪ್ರತಿಭಟನೆ ನಡೆಯುತ್ತಿದ್ದರೂ ಸ್ಥಳಕ್ಕೆ ಬಾರದ ಕ್ಷೇತ್ರ ಶಿಕ್ಷಣಾಧಿಕಾರಿ ನಡೆಗೆ ಪ್ರತಿಭಟನಾಕಾರರಿಂದ ಆಕ್ರೋಶ ವ್ಯಕ್ತವಾಯಿತು.
ಪ್ರತಿಭಟನೆಯಲ್ಲಿ ಅವುರ್ಲಿ ಗ್ರಾಮದ ರಾಘವೇಂದ್ರ ನಾಯ್ಕ, ಏಕನಾಥ ನಾಯ್ಕ, ಗಣೇಶ ವೇಳಿಪ, ರಾಮಚಂದ್ರ ಮರಾಠೆ, ಶ್ರೀಕಾಂತ ಮಿರಾಶಿ, ಮೀನಾಕ್ಷಿ ದೇಸಾಯಿ, ಬಾಲಚಂದ್ರ ವೇಳಿಪ, ಸದಾನಂದ ದೇವಿದಾಸ, ಗೀತಾ ಮಿರಾಶಿ, ಪ್ರೀತಿನಂದ ಶೇಟಕರ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net