ಕೃಷಿ ಭೂಮಿಗೆ ಒತ್ತಾಯಿಸಿ ಕೊರಗರ ಪ್ರತಿಭಟನೆ

byn (1)
Published on

ವಿಜಯವಾಣಿ ಸುದ್ದಿಜಾಲ ಬೈಂದೂರು ತಾಲೂಕಿನ ಕೊರಗ ಸಮುದಾಯದ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಈಡೇರಿಸಿಲ್ಲವೆಂದು ಆರೋಪಿಸಿ ಮಂಗಳವಾರ ಮಹಾತ್ಮಾ ಜ್ಯೋತಿಬಾಪುಲೆ ಕೊರಗರ ಕಲಾ ವೇದಿಕೆ ವತಿಯಿಂದ ಲಕ್ಷ್ಮಣ ಕೊರಗ ನೇತೃತ್ವದಲ್ಲಿ ಬೈಂದೂರು ಅಡಳಿತ ಸೌಧದ ಎದುರು ಹಕ್ಕೊತ್ತಾಯ ಪ್ರತಿಭಟನೆ ನಡೆಯಿತು. ಸಮುದಾಯದ ಹಲವು ಕುಟುಂಬಗಳಿಗೆ ಭೂಮಿ ಇಲ್ಲ, ಅನೇಕ ಬಾರಿ ಭೂಮಿ ನೀಡುವ ಬಗ್ಗೆ ಚರ್ಚೆ, ಸಭೆ ನಡೆದರೂ ಈವರೆಗೆ ಯಾರಿಗೂ ಭೂಮಿ ನೀಡಿಲ್ಲ. ಕೊರಗ ಸಮುದಾಯದವರಿಗೆ ಕೃಷಿ ಚಟುವಟಿಕೆಗೆ ಯೋಗ್ಯವಾದ ಭೂಮಿ ನೀಡಿ ಕೊರಗರ ಅಭಿವೃದ್ಧಿಗೆ ಸಹಕರಿಸಬೇಕೆಂದು ಲಕ್ಷ್ಮಣ ಕೊರಗ ಆಗ್ರಹಿಸಿದರು. ಕೊರಗ ಸಮುದಾಯ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಉಡುಪಿ ಜಿಲ್ಲಾಡಳಿತ ಕೊರಗರಿಗೆ ಕೃಷಿ ಭೂಮಿ ನೀಡಲು ಹಲವಾರು ಸಭೆ ಕರೆದು ಕೃಷಿ ಭೂಮಿ ನೀಡುವ ನಿರ್ಣಯ ಮಾಡಿತ್ತು. ಜಿಲ್ಲೆಯ ಬೇರೆ ತಾಲೂಕುಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭಿಸಿದ್ದು, ಬೈಂದೂರು ತಾಲೂಕಿನಲ್ಲಿ ಈ ಪ್ರಕ್ರಿಯೆ ಪ್ರಾರಂಭಗೊಳ್ಳದ ಹಿನ್ನೆಲೆ ಪ್ರತಿಭಟನೆ ನಡೆಸಲಾಗುತ್ತಿದೆ. ಸಮಸ್ಯೆಯನ್ನು ಒಂದು ತಿಂಗಳೊಳಗಾಗಿ ಬಗೆಹರಿಸದಿದ್ದಲ್ಲಿ ತಾಲೂಕು ಆಡಳಿತ ಸೌಧದ ಎದುರು ಅಹೋರಾತ್ರಿ ಸತ್ಯಾಗ್ರಹ ವಾಡುವುದಾಗಿ ಲಕ್ಷ್ಮಣ ಕೊರಗ ಎಚ್ಚರಿಸಿದರು. ಉಡುಪಿ ಐಟಿಡಿಪಿ. ಗಿರಿಜನ ಸಮನ್ವಯ ಅಧಿಕಾರಿ ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. ಸವಾಜ ಕಲ್ಯಾಣ ಇಲಾಖಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಸವಾಜದ ಮುಖಂಡರಾದ ಗಣೇಶ ಕುಂದಾಪುರ, ಗಣೇಶ ಬಾರ್ಕೂರು, ಸೂರಸಿದ್ಧ ಹೇರೂರು, ಸುರೇಶ ಯಳಜಿತ್, ರಾಜು ಪಡುಕೋಣೆ, ಸುರೇಶ ಕಲ್ಲಾಗಾರ, ಗಿರಿಜಾ ಮುದೂರು, ಸುನಿತಾ ಪಡುಕೋಣೆ, ನಾಗಮ್ಮ ಬೈಂದೂರು ಮುಂತಾದವರು ಇದ್ದರು. ಪ್ರತಿಭಟನೆಗೂ ಮೊದಲು ಬೈಂದೂರು ಪಟ್ಟಣ ಪಂಚಾಯಿತಿಯಿಂದ ತಾಲೂಕು ಕಚೇರಿವರೆಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಯಿತು.

ಸ್ಥಳಕ್ಕಾಗಮಿಸಿದ ಶಾಸಕರು

ಪ್ರತಿಭಟನೆ ಸುದ್ದಿ ತಿಳಿದ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಟನಾ ಸ್ಥಳಕ್ಕೆ ಆಗಮಿಸಿ ಕೊರಗ ಮುಖಂಡರೊಂದಿಗೆ ಚರ್ಚೆ ನಡೆಸಿ ಸಹಭೋಜನ ವಾಡಿದರು. ಕ್ಷೇತ್ರದ ಬಡವರ ಕಷ್ಟಗಳನ್ನು ಅರ್ಥವಾಡಿಕೊಂಡಿದ್ದು, ತಾವು ಸದಾ ಜನರ ಜತೆಗೆ ಇದ್ದೇವೆ. ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಾವಾಣಿಕ ಪ್ರಯತ್ನ ವಾಡುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net