ಸಿಡಿಪಿಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

Published on

ಮುದ್ದೇಬಿಹಾಳ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಶಿವಮೂರ್ತಿ ಕುಂಬಾರ ಅವರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ.

ಅವರನ್ನು ಇಲಾಖೆಯಿಂದಲೇ ಎತ್ತಂಗಡಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂದ ಪದಾಧಿಕಾರಿಗಳು, ಸದಸ್ಯರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ತಹಸೀಲ್ದಾರ್​, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ಮುಖ್ಯಮಂತ್ರಿ, ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ಕಾರ್ಯಕರ್ತೆಯರ ಸಭೆಯಲ್ಲಿ ಸಂದ ರಾಜ್ಯಾಧ್ಯೆ ನೀಲಮ್ಮ ಬೋರಾವರ್​ ಮಾತನಾಡಿ, ಸಿಡಿಪಿಒ ಅವರಿಂದ ನಡೆಯುತ್ತಿರುವ ಅನ್ಯಾಯದ ವಿವರಗಳನ್ನು ಬಿಡಿಸಿಟ್ಟು, ಶಾಸಕರಿಗೆ 5 ಲ ಕೊಟ್ಟು ಇಲ್ಲಿಗೆ ಬಂದಿದ್ದೇನೆ, ಯಾರೂ ಏನೂ ಮಾಡೋಕಾಗಲ್ಲ ಅಂತಾರೆ.

ಹಿಂದೆ ಎ.ಎಸ್​.ಪಾಟೀಲ ನಡಹಳ್ಳಿ ಅವರು ಶಾಸಕರಾಗಿದ್ದಾಗ ಇವರು ಎರಡು ತಿಂಗಳು ಇಲ್ಲಿನ ಸಿಡಿಪಿಒ ಪ್ರಭಾರ ಹೊಂದಿದ್ದರು. ಆಗ ಕಾರ್ಯಕರ್ತೆಯೊಬ್ಬಳ ಕೈಮೇಲೆ ಕೈಇಟ್ಟ ಕಾರಣಕ್ಕಾಗಿ ದೊಡ್ಡಮಟ್ಟದ ಪ್ರತಿಭಟನೆ ನಡೆಸಿ ಅವರನ್ನು ಇಲ್ಲಿಂದ ಬೇರೆಡೆ ಕಳಿಸಿದ್ದೆವು. ಈಗ ಮತ್ತೆ ಅದೇ ಕಾಯಕ ಮುಂದುವರಿಸಿದ್ದಾರೆ ಎಂದು ಆಪಾದಿಸಿದರು.

ಸಿಡಿಪಿಒ ಅಂಗನವಾಡಿ ಕೇಂದ್ರಕ್ಕೆ ಹೋಗುವಾಗ ಆಲ್ಕೋಹಾಲ್​ ಕುಡಿದ ಮತ್ತಿನಲ್ಲಿ ಕಾರ್ಯಕರ್ತೆಯರಿಗೆ ಏನು ಮಾತನಾಡುತ್ತಿದ್ದೇನೆ ಅನ್ನೋ ಪರಿವೇ ಹೊಂದಿರುವುದಿಲ್ಲ.

ಕೇಂದ್ರಕ್ಕೆ ಬಂದಾಗ ಸಹಿ ಮಾಡಲು ಕೊಟ್ಟ ಸಿಬ್ಬಂದಿ ಹಾಜರಿ ಪುಸ್ತಕ ಹರಿದು ಹೊರಗೆ ಎಸೆದು ಇಲ್ಲಿ ಜಾತ್ರೆಗೆ ಬಂದೀಯಾ, ಹಂದಿಯ ಹಾಗೆ ಕರ್ತವ್ಯ ನಿರ್ವಹಿಸುವೆಯಾ, ನಾಯಿ ಹಾಗೆ ಕೆಲಸ ಮಾಡುವೆಯಾ ಎಂದು ಹೀಯಾಳಿಸಿ ಕಾರ್ಯಕರ್ತೆಯರ ಮುಖದ ಮೇಲೆ ಹೊಡೆದು ಮಾತನಾಡುತ್ತಾರೆ.

ಹಾಯಕಿಯರಿಗೆ ಅವಾಚ್ಯ ಶಬ್ದಗಳಿಂದ ಬೈದು ಕಾಮುಕ ದೃಷ್ಟಿಯಿಂದ ನೋಡುತ್ತಾರೆ. ಕಚೇರಿಯಲ್ಲಿ ಎಸ್​ಇಟಿ (ಇಎಸ್​ಟಿ) ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಕಾರ್ಯಕರ್ತೆಯರು ಕಚೇರಿಗೆ ಹೋದಾಗ ಸಾಹೇಬರು ಕರೆಯುತ್ತಾರೆ ಬನ್ನಿ ಎಂದು ಹೇಳಿ ಕಳಿಸುತ್ತಾನೆ. ಹಿರೇಮುರಾಳ, ನಾಲತವಾಡ ವಲಯ ಮೇಲ್ವಿಚಾರಕಿ ವಿರುದ್ಧ ದೂರು ನೀಡಿದ್ದರೂ ಸಿಡಿಪಿಒ ಅವರು ಕಾಳಗಿ ವಲಯದ ಪ್ರಭಾರ ವಹಿಸಿದ್ದಾರೆ.

ಇವರು ಕಾರ್ಯಕರ್ತೆಯರಿಗೆ ಒಬ್ಬರೇ ಸಿಡಿಪಿಒ ಹತ್ತಿರ ಬರುವಂತೆ ಕರೆದುಕೊಂಡು ಹೋಗಿ ಅವರಿಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತ್ತಾರೆ.

ಸಿಡಿಪಿಒ ರಾತ್ರಿ 9 ಗಂಟೆಗೆ ಎಸ್​ಇಟಿ ಸಿಬ್ಬಂದಿ (ಪುರುಷ) ಮತ್ತು ಭಾಗ್ಯಲಕ್ಷಿ$್ಮ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ (ಪುರುಷ) ಜೊತೆ ಅಂಗನವಾಡಿ ಕೇಂದ್ರಕ್ಕೆ ಬಂದು ಕಾರ್ಯಕರ್ತೆಯರಿಗೆ ಬರುವಂತೆ ಕರೆಯುತ್ತಾರೆ. ತನ್ನ ಸ್ವಂತ ಕಾರಿನಲ್ಲಿ ತಾನೊಬ್ಬನೇ ಕಾರ್​ ಡೆವ್​ ಮಾಡಿಕೊಂಡು ಕೇಂದ್ರಕ್ಕೆ ಬರುವ ಇವರು ನಾನು ಹಾಕಿಕೊಂಡಿರುವ ಸೂಟು, ಬೂಟು ನೋಡ್ರಿ, ಶರ್ಟ್​ ನೋಡ್ರಿ, ಬಾಚಿಕೊಂಡ ನನ್ನ ತಲೆ ನೋಡ್ರಿ, ನಾನು ಚನ್ನಾಗಿಲ್ವಾ, ಮಿಲ್ಟ್ರಿಯಲ್ಲಿ ಕರ್ತವ್ಯ ನಿರ್ವಹಿಸಿ ಬಂದಿದ್ದೇನೆ. ನನಗೆ ಸಹಕರಿಸಿ ಎಂದು ಕೈ ಮೈ ಮುಟ್ಟುತ್ತ ಮಾತನಾಡುತ್ತಾನೆ ಎಂದು ಮನವಿಯಲ್ಲಿ ಲಿಖಿತವಾಗಿ ಗಂಭೀರ ಆರೋಪ ಮಾಡಿದ್ದಾರೆ.

ಮನವಿ ಸ್ವೀಕರಿಸಿದ ತಹಸೀಲ್ದಾರ್​ ಬಲರಾಮ ಕಟ್ಟಿಮನಿ ಅವರು ಮಾತನಾಡಿ, ಎಲ್ಲ ಅಂಶಗಳನ್ನು ಮೇಲಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಶೋಭಾ ಕಾಖಂಡಕಿ, ಶೋಭಾ ಘಾಟಗೆ, ರಾಜಶ್ರೀ ಮಮದಾಪುರ, ಶಶಿಕಲಾ ತೊಂಡಿಹಾಳ, ಅಯ್ಯಮ್ಮ ಮೂಕಿಹಾಳ, ಶಕುಂತಲಾ ದೊಡಮನಿ, ಎಂ.ಎಸ್​.ಸ್ಥಾವರಮಠ, ನಿಂಗಮ್ಮ ಕಾಳಾಪರ, ಚಂದ್ರಕಲಾ ತಳವಾರ, ಸಾಹೇಬ್ಬಿ ಕೆಸರಟ್ಟಿ, ರುದ್ರಮ್ಮ ಹಯ್ಯಾಳ, ಕಮಲಾ ದೇಶಪಾಂಡೆ ಸೇರಿ 100ಕ್ಕೂ ಹೆಚ್ಚು ಕಾರ್ಯಕರ್ತೆಯರು, ಸಹಾಯಕಿಯರು ಇದ್ದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಾರ್ಯಕರ್ತೆಯರು, ಸಹಾಯಕಿಯರು ಅಂಗನವಾಡಿ ಕೇಂದ್ರದ ಅವಧಿ ಮುಗಿದ ನಂತರ ಮಧ್ಯಾಹ್ನ ರ್ಯಾಲಿ ನಡೆಸಿದರು. ಎಸ್ಸೆಸ್ಸೆಲ್ಸಿ ಪರೀಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಇಲಾಖೆಯ ವಿಜಯಪುರ ಕಚೇರಿಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ ಇಲ್ಲಿಗೆ ಬಂದಿದ್ದರು. ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆಯ ಮಾಹಿತಿ ತಿಳಿದ ಅವರು ಸಿಡಿಪಿಒ ವಿರುದ್ಧ ಗರಂ ಆಗಿ ಹರಿಹಾಯ್ದು ಯಾರನ್ನೂ ಭೇಟಿಯಾಗದೆ ನಿರ್ಗಮಿಸಿದರು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಡಿ ಚವ್ಹಾಣ ಅವರು ಪರೀಾ ಕರ್ತವ್ಯಕ್ಕೆ ಬಂದಿದ್ದೆ. ನನ್ನ ಹತ್ತಿರ ಮನವಿ ಕೊಡಲು ಯಾರೂ ಬಂದಿಲ್ಲ. ಸಿಡಿಪಿಒ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಸಿಡಿಪಿಒ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ ಅವರು ಮೋಬೈಲ್​ ಕರೆ ಸ್ವೀಕರಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net