ಯುವತಿ ಮೇಲೆ ದೌರ್ಜನ್ಯ, ಕೊಲೆ ಖಂಡಿಸಿ ಪ್ರತಿಭಟನೆ

Protest condemning the violence and murder of a young woman
Published on

ವಿಜಯಪುರ:ಮುದ್ದೇಬಿಹಾಳ ತಾಲೂಕಿನ ಬನೋಶಿ ಗ್ರಾಮದ ಯುವತಿ ಮೇಲಿನ ದೌರ್ಜನ್ಯ ಹಾಗೂ ಕೊಲೆ ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸತಿಕ ಸಂಟನೆ(ಎಐಎಂಎಸ್​ಎಸ್​) ಕಾರ್ಯಕರ್ತೆಯರು ಬುಧವಾರ ಪ್ರತಿಭಟನೆ ನಡೆಸಿದರು.ನಗರದ ಅಂಬೇಡ್ಕರ್​ ವೃತ್ತದಲ್ಲಿ ಜಮಾಯಿಸಿದ ಸಂಟನೆಯ ಕಾರ್ಯಕರ್ತೆಯರು ಬನೋಶಿ ಗ್ರಾಮದಲ್ಲಿ ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ 17 ವರ್ಷದ ಯುವತಿಯ ಶವ ಪತ್ತೆಯಾಗಿರುವ ಭೀಕರ ಟನೆ ಖಂಡಿಸುವ ಜತೆಗೆ ತಪ್ಪಿತಸ್ಥರಿಗೆ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿದರು.

ಎಐಎಂಎಸ್​ಎಸ್​ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗೂಳಿ ಮಾತನಾಡಿ, ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಅದಕ್ಕೆ ನಮ್ಮ ಜಿಲ್ಲೆಯೂ ಹೊರತಾಗಿಲ್ಲ. ಇಂದು ಮಾಧ್ಯಮಗಳೂ ಹೆಣ್ಣು ಮಕ್ಕಳನ್ನು ಭೋಗದ ವಸ್ತು ಎಂಬಂತೆ ಚಿತ್ರಿಸುತ್ತಿವೆ. ವೆಬ್​ಸೈಟ್​ಗಳಲ್ಲಿ ಅಶ್ಲೀಲತೆ ಪ್ರಚಾರ ಮಾಡುತ್ತಿದ್ದು, ಅದರಿಂದಾಗಿ ಸಮಾಜದಲ್ಲಿ ಸಾಂಸತಿಕ ಅಧ@ಪತನ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದರು.ಈ ಟನೆ ಬಗ್ಗೆ ಸೂಕ್ತ ತನಿಖೆ ನಡೆಸಬೇಕಲ್ಲದೆ, ಅಪರಾಧಿಗಳಿಗೆ ಕಠಿಣ ಶಿೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸಂಟನೆ ಜಿಲ್ಲಾಧ್ಯಕ್ಷೆ ಗೀತಾ ಎಚ್​., ಮೀನಾ ಸಿಂಗೆ, ನೀಲಾಂಬಿಕೆ, ಶಶಿಕಲಾ, ಅಮೂಲ್ಯ, ಸುಷ್ಮಿತಾ ಚಲವಾದಿ, ಐಶ್ವರ್ಯ ಜಾಧವ, ಭಾಗ್ಯಲಕ್ಷಿ$್ಮ ಮತ್ತಿತರರಿದ್ದರು.

ಬನೋಶಿ ಗ್ರಾಮದ ಯುವತಿ ಮೇಲಿನ ದೌರ್ಜನ್ಯ ಹಾಗೂ ಕೊಲೆ ಖಂಡಿಸಿ ವಿಜಯಪುರದ ಡಾ. ಬಿ.ಆರ್​. ಅಂಬೇಡ್ಕರ್​ ವೃತ್ತದಲ್ಲಿ ಎಐಎಂಎಸ್​ಎಸ್​ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಶಿವಬಾಳಮ್ಮ ಕೊಂಡಗೂಳಿ, ಗೀತಾ ಎಚ್​., ಮೀನಾ ಸಿಂಗೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net