ಅಪಮಾನ ಖಂಡಿಸಿ ಪ್ರತಿಭಟನೆ

Protest condemning the insult
Published on

ಕಲಾದಗಿ:ಕಲಬುರ್ಗಿ ಜಿಲ್ಲೆ ಶಹಬಾದ ತಾಲೂಕಿನ ಮುತ್ತಗಿ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಕಿಡಿಗೇಡಿಗಳು ಅಪಮಾನ ಮಾಡಿರುವುದನ್ನು ಖಂಡಿಸಿ ನಿಜಶರಣ ಅಂಬಿಗರ ಚೌಡಯ್ಯ ೇಮಾಭಿವೃದ್ಧಿ ಸಂದ ವತಿಯಿಂದ ಗುರುವಾರ ಗ್ರಾಮದಲ್ಲಿ ಬೃಹತ್​ ಪ್ರತಿಭಟನೆ ಜರುಗಿತು.

ಬೆಳಗ್ಗೆ ಗ್ರಾಮದ ಸಾಯಿಬಾಬಾ ಮಂದಿರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಾದಯಾತ್ರೆಯ ಮೂಲಕ ತಪ್ಪಿತಸ್ಥರಿಗೆ ಶಿೆ ನೀಡುವಂತೆ ಆಗ್ರಹಿಸಿದರು.

ಗುರುಲಿಂಗೇಶ್ವರ ಪ್ರೌಢಶಾಲೆ, ಬಸ್​ನಿಲ್ದಾಣ, ಡಾ. ಅಂಬೇಡ್ಕರ್​ ವೃತ್ತದ ಮೂಲಕ ಸಾಗಿದ ಪ್ರತಿಭಟನಾಕಾರರು ನಾಡಕಚೇರಿ ತಲುಪಿ ಉಪ ತಹಸೀಲ್ದಾರ ಆರ್​.ಆರ್​. ಕುಲಕರ್ಣಿ ಅವರ ಮೂಲಕ ಮನವಿ ಸಲ್ಲಿಸಿದರು.ಸಂದ ಮುಧೋಳ ತಾಲೂಕು ಅಧ್ಯ ಸದಾಶಿವ ಹೊಸಮನಿ, ನಿಜ ಶರಣ ಎಂದೇ ಖ್ಯಾತರಾದ ವಚನಗಳ ಮೂಲಕ ಇಂದಿಗೂ ಸಮಾಜವನ್ನು ಬೆಳಗುತ್ತಿರುವ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಗೆ ಅಪಮಾನಮಾಡಿರುವುದು ಖಂಡನೀಯ. ಇದು ಸಾಂಕೇತಿತ ಪ್ರತಿಭಟನೆ. ಸರ್ಕಾರ ಕೂಡಲೇ ಈ ದುರ್ಟನೆಗೆ ಕಾರಣರಾದವರನ್ನು ಬಂಧಿಸದಿದ್ದರೆ ಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಸಿದರು.

ಮುಖಂಡರಾದ ಮಂಜು ಮಂಡಗನೂರು, ಚೇತನ ಉಳ್ಳಾಗಡ್ಡಿ, ಮಲ್ಲು ಜಾಡರ, ಬಸವರಾಜ ಚುಳುಕಿ, ಲಕ್ಷ$್ಮಣ ಪೂಜಾರ, ಸದಾಶಿವ ವಾಲೀಕಾರ, ಚಂದಪ್ಪ ಕಟ್ಟಿಮನಿ, ಗೋಪಾಲ ಬಾರ್ಕೆರ, ರಮೇಶ ಜಾಡರ, ಹನುಮಂತ ಪೂಜಾರ, ರಮೇಶ ಸುಣಗಾರ, ಗಂಗವ್ವ ಪೂಜಾರಿ, ರುಕ್ಮವ್ವ ಜಾಡರ, ಸದಾಶಿವ ಪೂಜಾರ ಇದ್ದರು.

* ಚಿತ್ರರ್ಶಿಷಿಕೆ: 16&ಕೆಎಲ್​ಡಿಜಿ 1

ಕಲಾದಗಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ೇಮಾಭಿವೃದ್ಧಿ ಸಂದ ವತಿಯಿಂದ ಪ್ರತಿಭಟನಾ ಮೆರವಣಿಗೆಮಾಡಿ ಉಪ ತಹಸೀಲ್ದಾರ ಆರ್​.ಆರ್​. ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಂದ ಮುಧೋಳ ತಾಲೂಕು ಅಧ್ಯ ಸದಾಶಿವ ಹೊಸಮನಿ, ಮುಖಂಡರಾದ ಮಂಜು ಮಂಡಗನೂರು, ಚೇತನ ಉಳ್ಳಾಗಡ್ಡಿ, ಮಲ್ಲು ಜಾಡರ, ಬಸವರಾಜ ಚುಳುಕಿ, ಲಕ್ಷ$್ಮಣ ಪೂಜಾರ, ಸದಾಶಿವ ವಾಲೀಕಾರ, ಚಂದಪ್ಪ ಕಟ್ಟಿಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net