ವಿದ್ಯಾರ್ಥಿನಿ ಸಾವು ಖಂಡಿಸಿ ಪ್ರತಿಭಟನೆ

Protest condemning the death of a student
ಮುಧೋಳ ನಗರದ ಶಾರದಾ ಪಿಯುಸಿ ಕಾಲೇಜಿನಲ್ಲಿ ಪ್ರಥಮ ಪಿಯು ಓದುತಿದ್ದ ವಿದ್ಯಾರ್ಥಿನಿ ತೇಜಸ್ವಿನಿ ಸುಂದರ ದೊಡಮನಿ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಸಮಾಜದ ಹಿರಿಯರ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Published on

ಮುಧೋಳ: ನಗರದ ಶಾರದಾ ಪಿಯುಸಿ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ವಿದ್ಯಾರ್ಥಿನಿ ತೇಜಸ್ವಿನಿ ಸುಂದರ ದೊಡಮನಿ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಭೀಮ್ ಅರ್ಮಿಯ ಮೂಲ ನಿವಾಸಿ ಏಕತಾ ಪರಿಷತ್ ಹಾಗೂ ಸಮಾಜದ ಹಿರಿಯರ ನೇತೃತ್ವದಲ್ಲಿ ಶನಿವಾರ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸಚಿವ ಆರ್.ಬಿ. ತಿಮ್ಮಾಪುರಗೆ ಮನವಿ ಸಲ್ಲಿಸಲಾಯಿತು.

ಭೀಮ್ ಆರ್ಮಿ ಸಂಸ್ಥಾಪಕ ಅಧ್ಯಕ್ಷ ಸುನೀಲ ಕಂಬೋಗಿ ಮಾತನಾಡಿ, ತೇಜಶ್ವಿನಿಯನ್ನು ಕಾಲೇಜಿನಲ್ಲಿ ಫೆ.27ರಂದು ಅವಮಾನಿಸಿದ ವಿಷಯ ತನ್ನ ತಾಯಿಯ ಬಳಿ ಹೇಳಿ ಫೆ.28ರಂದು ತಾಯಿಯ ಜತೆಗೆ ಹೋದಾಗ ಕಾಲೇಜಿನ ಉಪನ್ಯಾಸಕರು ತಾಯಿಯ ಎದುರಿನಲ್ಲೇ ವಿದ್ಯಾರ್ಥಿನಿಯನ್ನು ಅವಮಾನಸಿದಕ್ಕೆ ಮನನೊಂದು ಕಾಲೇಜಿನಿಂದ ಮನೆ ಹೋಗಿಲ್ಲ. ಮಾ.1ರಂದು ಮುಧೋಳದಲ್ಲಿ ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದೆ. ಫೆ.2ರಂದು ನಗರದ ಮಹಾರಾಣಿ ಕೆರೆಯಲ್ಲಿ ಶವವಾಗಿ ಪತ್ತೆ ಯಾಗಿದೆ ಎಂದರು.

ವಿದ್ಯಾರ್ಥಿನಿಯ ಸಾವಿಗೆ ಶಾರದಾ ಪಿಯು ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯೇ ನೇರ ಕಾರಣ ಎಂದು ವಿದ್ಯಾರ್ಥಿನಿಯ ತಾಯಿ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಓದಿ ಕುಟುಂಬಕ್ಕೆ ಆಸರೆಯಾಗಬೇಕಿದ್ದ ಅಮೂಲ್ಯ ರತ್ನವೊಂದು ತನ್ನ ಜೀವ ಕಳೆದುಕೊಂಡಿದೆ. ವಿದ್ಯಾರ್ಥಿನಿ ಕುಟುಂಬ ನ್ಯಾಯ ಒದಗಿಸಿಕೊಡಬೇಕು. ಸ್ವಾಮಿ ವಿವೇಕಾನಂದ ವಿದ್ಯಾವರ್ಧಕ ಸಂಸ್ಥೆಯ ಶಾರದಾ ಪಿಯು ಕಾಲೇಜಿನ ಪರವಾನಗಿ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ಭೀಮ್ ಆರ್ಮಿ ಸಂಸ್ಥಾಪಕ ಅಧ್ಯಕ್ಷ ಸುನೀಲ ಕಂಬೋಗಿ, ರಾಜ್ಯಾಧ್ಯಕ್ಷ ಲವಿತ್ ಮೇತ್ರಿ, ರಾಜ್ಯ ಸಂಚಾಲಕ ಅನಿಲ ಬರಗಿ, ಕೃಷ್ಣಪ್ಪ ಪೂಜಾರ, ಹಿರಿಯ ಹೋರಾಟಗಾರರಾದ ಸತೀಶ ಗಾಡಿ, ಮಹೇಶ ಹುಗ್ಗಿ, ಪ್ರಕಾಶ ಮಾಂಗ,ಪರಶುರಾಮ ಮೇತ್ರಿ, ಅಶೋಕ ಮಾಂಗ, ಮಾನಿಂಗ ಮೇತ್ರಿ, ಯಲ್ಲಪ್ಪ ತಳಗೇರಿ, ಹಾಸೀಮ್ ಜಕ್ಕಲಿ, ಯಾಕೂಬ್ ಪೂಜಾರಿ, ಸುರೇಶ ಮೇತ್ರಿ ,ರೇಣುಕಾ ತಳವಾರ,ರುಕ್ಕವ್ವ ಪೂಜಾರಿ, ಯಮನವ್ವ ಈರಗಾರ, ರಮೇಶ ನಾಗೋಗೋಳ, ಮಾದೇವ ಮೀಶಿ, ಚೇತನ ಪೂಜಾರ, ಸಂಜು ಮಾಂಗ, ಕರಣಕುಮಾರ ಮೌರ್ಯ, ಯಮನಪ್ಪ ಮಾಂಗ, ಪುಟ್ಟು ಮೇತ್ರಿ ಇದ್ದರು.

ಭರವಸೆ: ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಈ ಕುರಿತು ತನಿಖಾ ತಂಡ ರಚನೆ ಮಾಡಿ ಸೂಕ್ತ ನ್ಯಾಯ ಒದಗಿಸುವ ಭರವಸೆಯನ್ನು ಪ್ರತಿಭಟನೆಗಾರರಿಗೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net