ಏ.1ರಂದು ರೈಲ್ವೇ ಮೇಲ್ಸೇತುವೆ ವಿಳಂಬ ಖಂಡಿಸಿ ವಿಶಿಷ್ಟ ಪ್ರತಿಭಟನೆ

udp-protset
Published on

ಉಡುಪಿ: ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ವತಿಯಿಂದ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಏ.1ರಂದು ಎಪ್ರಿಲ್​ ುಲ್​ ದಿನಾಚರಣೆಯೊಂದಿಗೆ ವಿಶಿಷ್ಟ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಧಾನ ಸಂಚಾಲಕ ಅಮೃತ್​ ಶೆಣೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೈಲ್ವೇ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಸಂಸದರಾದ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ ಕಳೆದ 9 ವರ್ಷಗಳಿಂದ ಸೇತುವೆ ಕಾಮಗಾರಿಗೆ ದಿನಾಂಕದ ಮೇಲೆ ದಿನವನ್ನು ನಿಗದಿ ಮಾಡುತ್ತಾ ಜನರನ್ನು ೂಲ್​ ಮಾಡಿದ್ದಾರೆ. ಹೀಗಾಗಿ ಏ.1ರಂದೇ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಮಧ್ಯಾಹ್ನ 2.30ಕ್ಕೆ ಕಲ್ಸಂಕದಿಂದ ಇಂದ್ರಾಳಿವರೆಗೆ ಸೇತುವೆ ಮಾದರಿ ಟ್ಯಾಬ್ಲೋದೊಂದಿಗೆ ಬೃಹತ್​ ಜಾಥಾ ಆಯೋಜಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಹಣದ ಕೊರತೆಯಾಗಿದ್ದರೆ ಸಮಿತಿ ಸದಸ್ಯರು ಭಿೆ ಬೇಡಿ ಕೇಂದ್ರ ಸರ್ಕಾರಕ್ಕೆ ಹಣವನ್ನು ಕಳುಹಿಸಿಕೊಡಲಿದ್ದಾರೆ ಎಂದು ತಿಳಿಸಿದರು. ಸಮಿತಿ ಅಧ್ಯಕ್ಷ ಕೀರ್ತಿ ಶೆಟ್ಟಿ ಅಂಬಲಪಾಡಿ, ಉಪಾಧ್ಯಕ್ಷರಾದ ಮಹಾಬಲ ಕುಂದರ್​, ಕುಶಾಲ್​ ಶೆಟ್ಟಿ, ಹರಿಪ್ರಸಾದ್​ ರೈ, ಸದಸ್ಯರಾದ ಅನ್ಸಾರ್​ ಅಹಮದ್​, ಮೀನಾ ಬನ್ನಂಜೆ, ಅಬ್ದುಲ್​ ಅಜೀಝ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net