

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಮೇಲೆ ಹಲ್ಲೆಗೆ ಯತ್ನ ಹಾಗೂ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ ಖಂಡಿಸಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ಸಾಗುತ್ತಿದ್ದಾಗ ಬಿಜೆಪಿಗರು ರಾಹುಲ್ ಗಾಂಧಿ ಬಸ್ ಅಡ್ಡಗಟ್ಟಿ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದಾರೆ. ಇದು ಖಂಡನೀಯ. ಗೂಂಡಾಗಿರಿಯು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಆಶೋತ್ತರ, ಭಾರತದ ಶಾಂತಿ ಸೌಹಾರ್ದತೆ, ಭಾರತದ ಅಸ್ಮಿತೆ ಮೇಲೆ ನಡೆಸಿದ ಗೂಂಡಾಗಿರಿಯಾಗಿದೆ ಎಂದು ದೂರಿದರು.
ಬಿಜೆಪಿಯವರ ಗೂಂಡಾವರ್ತನೆ ಸರಿಯಲ್ಲ. ಇದೇ ರೀತಿ ಮುಂದುವರೆದಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಸ್ವರೂಪದ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ದೀಪಕ ಚಿಂಚೋರೆ, ಜಗದೀಶ ಉಪ್ಪಿನ, ಸದಾನಂದ ಡಂಗನವರ, ಆನಂದ ಜಾಧವ, ಮಾಜಿ ಸಂಸದ ಐ.ಜಿ. ಸನದಿ, ರಜತ ಉಳ್ಳಾಗಡ್ಡಿಮಠ, ಶರಣಪ್ಪ ಕೊಟಗಿ, ಚಂದ್ರಶೇಖರ ಜುಟ್ಟಲ, ವರ್ಧಮಾನ ಗೌಡ, ಮಂಜು ಮಾಯಣ್ಣವರ, ಬಸವರಾಜ ಕಿತ್ತೂರ, ಸುರೇಶ ಕರಿಗೌಡರ, ಸುರೇಶ ಸವಣೂರ, ಜೇಮ್ಸ್ ಯಾಮಾ, ಆನಂದ ಮುಶಣ್ಣವರ, ಗೌರಿ ನಾಡಗೌಡ, ಕವಿತಾ ಕಬ್ಬೇರ, ಇತರರು ಇದ್ದರು.