ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆಯುವ ಯತ್ನಕ್ಕೆ ವಿರೋಧ: ವಿವಿಧ ಸಂಘಟನೆ ಮುಖಂಡರ ಪ್ರತಿಭಟನೆ

Protest by various organization leaders Mandya
Published on

ಮಂಡ್ಯ: ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ಘಟನೆ ಖಂಡಿಸಿ ವಿವಿಧ ಸಂಘಟನೆ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಸಂಘಟನೆ ಕಾರ್ಯಕರ್ತರು, ಜನಪರ ಸಂಘಟನೆಗಳು ಒಗ್ಗೂಡಿ ಸಂವಿಧಾನ ರಕ್ಷಣೆ ಮಾಡಿ ನ್ಯಾಯಾಧೀಶರಿಗೆ ಅಗೌರವ ಮತ್ತು ಅಲ್ಲಿಗೆ ಮುಂದಾದ ವಕೀಲನಿಗೆ ತಕ್ಕ ಶಿಕ್ಷೆಯಾಗಲಿ ಎಂದು ಘೋಷಣೆಗಳನ್ನು ಕೂಗಿದರು.

ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಹುರುಗಲವಾಡಿ ರಾಮಯ್ಯ ಮಾತನಾಡಿ, ಕೋಮುವಾದಿ ಮನಸ್ಸುಳ್ಳ ವಕೀಲ ರಾಕೇಶ್ ಕಿಶೋರ್ ಎಂಬಾತ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮೇಲೆ ಶೂ ಎಸೆದಿರುವುದನ್ನು ಇಡೀ ದೇಶ ಖಂಡಿಸಿದೆ. ಇದು ಕೋಮುವಾದಿಗಳು, ಸನಾತನಿಗಳ ಬೆಂಬಲದಿಂದ ನಡೆದ ದೇಶ ದ್ರೋಹದ ಕೃತ್ಯ. ಇದು ನ್ಯಾಯಾಧೀಶರ ಮೇಲೆ ನಡೆದ ಹಲ್ಲೆ ಪ್ರಯತ್ನವಷ್ಟೇ ಅಲ್ಲ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಾದ ದೌರ್ಜನ್ಯ ಎಂದು ಆಕ್ರೊಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ರೈತ ನಾಯಕಿ ಸುನಂದಾ ಜಯರಾಂ, ಸಿಐಟಿಯು ಕುಮಾರಿ, ಸಂವಿಧಾನ ರಕ್ಷಣಾ ಪಡೆ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ವಕೀಲರಾದ ಚೀರನಹಳ್ಳಿ ಲಕ್ಷ್ಮಣ್, ಬಿ.ಟಿ.ವಿಶ್ವನಾಥ್, ಯಶ್ವಂತ್, ಟಿ.ಎಲ್.ಕೃಷ್ಣೇಗೌಡ, ಎಂ.ವಿ.ಕೃಷ್ಣ, ಚಂದ್ರಶೇಖರ್, ಗಂಗಾಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net