

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೇಜೋವಧೆಯ ಜೊತೆಗೆ ಬಿಜೆಪಿ- ಜೆಡಿಎಸ್‌ನವರು ಆಡಳಿತಾರೂಢ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಹಿಂದುಳಿದ ಜಾತಿಗಳ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಕಲಾಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಕೋರ್ಟ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬಿಜೆಪಿ, ಜೆಡಿಎಸ್ ವಿರುದ್ಧ ಘೋಷಣೆ ಕೂಗಿದರು. ಅಲ್ಲಿಂದ ಜಿಲ್ಲಾಽಕಾರಿ ಕಚೇರಿಗೆ ತೆರಳಿ ಜಿಲ್ಲಾಽಕಾರಿ ಮೂಲಕ ರಾಷ್ಟçಪತಿಗೆ ಮನವಿ ರವಾನಿಸಿದರು.
ಕೋಮುವಾದಿಗಳು ಮತ್ತು ಜಾತಿವಾದಿ ಅಽಕಾರಕ್ಕಾಗಿ ಜನಪರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರಾಗಿ 15 ಬಾರಿ ಬಜೆಟ್ ಮಂಡಿಸಿರುವಸಿಎA ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಸುದೀರ್ಘ 40 ವರ್ಷ ರಾಜಕೀಯದ ವರ್ಚಸ್ಸಿಗೆ ಮಸಿ ಬಳಿಯುವ ಹುನ್ನಾರ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸಮಾಜವಾದದ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯ ಅವರು ತಮ್ಮ ಮೇಲೆ ಆರೋ¥ ಬಂದಾಗ ತಾವೇ ತನಿಖಾ ಆಯೋಗ ರಚಿಸಿದ್ದಾರೆ. ರಾಜ್ಯಪಾಲರು ತಮ್ಮ ನಡೆಯನ್ನು ಹಿಂಪಡೆಯದಿದ್ದರೆ ರಾಜಭವನ ಚಲೋ ಮೂಲಕ ಬೃಹÀತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಾಗರಾಜ ಗುರಿಕಾರ, ದಾನಪ್ಪ ಕಬ್ಬೇರ, ಶ್ರೀ ಬಸವರಾಜ ದೇವರು, ಬಸವರಾಜ ಬಸಲಿಗುಂದಿ, ವಿನೋದ ಅಸೂಟಿ, ಮೆಹಬೂಬ ಪಠಾಣ, ರಾಮಣ್ಣ ಹರಿಣಶಿಕಾರಿ, ಸಲೀಂ ಸಂಗನಮಲ್ಲ, ಅಶೋಕ ತುರಾಯಿದಾರ, ಭೀಮಣ್ಣ ಹೊನಕೇರಿ, ಶಿವಾನಂದ ಬೆಂತೂರ, ಮೋಹನ ಹೊಸಮನಿ, ಸಿದ್ದಪ್ಪ ಪ್ಯಾಟಿ, ಗಣೇಶ ಹಡಪದ, ಇತರರಿದ್ದರು.