ಕುಸ್ತಿ ಸಂಘದಿ೦ದ ಬೃಹತ್ ಪ್ರತಿಭಟನೆ

22 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಪ್ರತಿಷ್ಠಿತ ಮಾರುತಿ ಗರಡಿ ಮನೆಯನ್ನು ಜೀರ್ಣೋದ್ಧಾರ ಮಾಡುವುದು, ಮಾಜಿ ಪೈಲ್ವಾನರಿಗೆ ಕನಿಷ್ಠ 10 ಸಾವಿರ ರೂಪಾಯಿ ಮಾಸಾಶನ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾ ಕುಸ್ತಿ ಸಂಘದಿ0ದ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕಲಘಟಗಿ ರಸ್ತೆಯ ಮಾರುತಿ ತಾಲೀಮನಿಂದ ನೂರಾರು ಪೈಲ್ವಾನರು ಜಿಲ್ಲಾಽಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಾಸಾಶನ ಪಡೆಯಲು ನಿಗದಿತ ಆದಾಯ ಮಿತಿಯನ್ನು 1 ಲಕ್ಷ ರೂಪಾಯಿಗೆ ಏರಿಸಬೇಕು. ಜಿಲ್ಲೆಗೊಂದು ಕುಸ್ತಿ ವಸತಿ ತರಬೇತಿ ಶಾಲೆ ಹಾಗೂ ಕುಸ್ತಿ ಕ್ರೀಡಾಂಗಣ ಸ್ಥಾಪಿಸಬೇಕು. ಮಾಸಾಶನ ವಯೋಮಿತಿಯನ್ನು 40 ವರ್ಷಕ್ಕೆ ಇಳಿಸಬೇಕು. ಮಾಜಿ ಹಾಗೂ ಹಾಲಿ ಕುಸ್ತಿಪಟುಗಳಿಗೆ ರೈಲು, ಬಸ್ ಉಚಿತ ಪಾಸ್ ನೀಡಬೇಕು. ಸರ್ಕಾರಿ ನಿವೇಶನ ಹಂಚಿಕೆಯಲ್ಲಿ ಆದ್ಯತೆ ನೀಡಬೇಕು. ವಿವಿಧ ನೇಮಕಾತಿಗಳಲ್ಲಿ ಕುಸ್ತಿಪಟುಗಳಿಗೆ ಕನಿಷ್ಠ ಎತ್ತರದಲ್ಲಿ ರಿಯಾಯಿತಿ ನೀಡಬೇಕು. ಅಂತಾರಾಷ್ಟ್ರೀಯ ಕುಸ್ತಿಪಟು ದಿ. ಚಂಬಾ ಮುತನಾಳ ಅವರ ಹೆಸರಿನಲ್ಲಿ ಧಾರವಾಡ, ಬೆಳಗಾವಿಯಲ್ಲಿ ರಾಷ್ಟçಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಬೇಕು. ಪಾಲಿಕೆಯಿಂದ ಪ್ರತಿವರ್ಷ `ಮಹಾಪೌರ ಕೇಸರಿ' ಕುಸ್ತಿ ಪಂದ್ಯಾವಳಿ ಆಯೋಜಿಸಬೇಕು ಎಂದು ಜಿಲ್ಲಾಽಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.

ಪಿ.ಎಚ್. ನೀರಲಕೇರಿ, ರತ್ನಕುಮಾರ ಮಠಪತಿ, ಎಂ.ಆರ್. ಪಾಟೀಲ, ಅರ್ಜುನ ಖಾನಾಪುರ, ರಾಜೇಸಾಬ ಉಗರಗೋಳ, ಶಿವಲಿಂಗಪ್ಪ ಕುಂದರಗಿ, ಶಿವನಪ್ಪ ಬಂಗಾರಿ, ಶಿವಣ್ಣ ದಾನೆನವರ, ಮಲ್ಲೇಶಪ್ಪ ಹಿರೇಹೊನ್ನಳ್ಳಿ, ಮಲ್ಲಿಕಾರ್ಜುನ ಮುನವಳ್ಳಿ, ಮಕ್ತುಂ ನದಾಫ, ರೇವಣಸಿದ್ದಪ ರಾಯನಾಳ, ರಾಮು ಮುನವಳ್ಳಿ, ಗುರುನಾಥ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net