ಗಾಂಧಿಚೌಕ್ ನಿವಾಸಿಗಳಿಂದ ಪ್ರತಿಭಟನೆ

12 Dwd 1
Published on

ಧಾರವಾಡ: ಇಲ್ಲಿನ ಗಾಂಧಿ ಚೌಕ್ ಬಳಿ ಕಾಂಕ್ರೀಟ್ ರಸ್ತೆ ನಿರ್ವಿುಸಿ 4 ವರ್ಷಗಳಾದರೂ ಪಾದಚಾರಿ ಮಾರ್ಗ ನಿರ್ಮಾಣ ಮಾಡದಿರುವುದನ್ನು ಖಂಡಿಸಿ ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

4 ವರ್ಷಗಳಿಂದ ಪಾದಚಾರಿ ಮಾರ್ಗ ಮಾಡದೆ ಕೇವಲ ಮಣ್ಣು ಹಾಕಿ ಮುಚ್ಚಿಸಲಾಗಿದೆ. ಅಲ್ಲದೆ, 50 ಮೀಟರ್​ಗೊಂದರಂತೆ ಕಾಂಕ್ರೀಟ್ ರಸ್ತೆಯಲ್ಲಿ ಪೇವರ್ಸ್ ಅಳವಡಿಸಿದ್ದು, ಅವು ಸಹ ಕಿತ್ತು ಹೋಗಿವೆ. ಈ ಬಗ್ಗೆ ಸ್ಥಳೀಯ ಶಾಸಕ ಅರವಿಂದ ಬೆಲ್ಲದ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. 15 ದಿನಗಳಲ್ಲಿ ಅವ್ಯವಸ್ಥೆ ಸರಿಪಡಿಸದಿದ್ದರೆ ನಿರಂತರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಬಸವರಾಜ ಜಾಧವ, ಸೋಮೇಶ ಕವಳಿ, ಉಮೇಶ ಗೋತ್ರಾಳೆ, ರಘು ಬಡೀಗೇರ, ಪ್ರತೀಕ ತೋಟದವರ, ರವಿ ಜಾಧವ, ಬಸು ಯಲಿಗಾರ, ಹಿದಾಯತ್ ರಾಯಚೂರ, ಸಾಹಿಲ್ ಕಿತ್ತೂರ, ಪ್ರಕಾಶ ದೂಡವಾಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net