ಜೂ.10ಕ್ಕೆ ರೈತಸಂಘ ಏಕೀಕರಣ ಸಮಿತಿಯಿಂದ ಪ್ರತಿಭಟನೆ

28M.D.R.3
Published on

ಮದ್ದೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದೆ. ಅಧಿಕಾರಿಗಳ ಲಂಚಗುಳಿತನದಿಂದ ಸಾರ್ವಜನಿಕರು ಹಾಗೂ ರೈತರು ಪರಿತಪಿಸುತ್ತಿದ್ದಾರೆ. ಈ ವಿಚಾರವಾಗಿ ತಾಲೂಕು ಕಚೇರಿ ಎದುರು ಜೂನ್ 10ರಂದು ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ರೈತ ಸಂಘದ ಏಕೀಕರಣ ಸಮಿತಿ ತಾಲೂಕು ಅಧ್ಯಕ್ಷ ಪ್ರಭುಲಿಂಗ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ರೈತ ಸಂಘದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಕೆಲಸ ವಿಳಂಬವಾಗುತ್ತಿದೆ. ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಯಲ್ಲಿ ಅಧಿಕಾರಿಗಳು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ರೈತ ಮುಖಂಡ ಸೊ.ಸಿ.ಪ್ರಕಾಶ್ ಮಾತನಾಡಿ, ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಸಬಾರದು. ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಅನೇಕ ಸಮಸ್ಯೆಗಳ ವಿಚಾರವಾಗಿ ಜೂ.10ರಂದು ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದ್ದು, ಸಾರ್ವಜನಿಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ರೈತ ಮುಖಂಡರಾದ ಕಿಳಘಟ್ಟ ನಂಜುಂಡಯ್ಯ, ರಾಮಕೃಷ್ಣಯ್ಯ, ರಾಮಲಿಂಗೇಗೌಡ, ನಾಗರಾಜ, ವೆಂಕಟೇಶ, ಸೀತಾರಾಮ, ನಂಜುಂಡಪ್ಪ, ಚೆನ್ನಪ್ಪ, ಕುಮಾರ, ಉಮೇಶ, ರಾಮೇಗೌಡ, ಲಿಂಗರಾಜ, ರಾಮಸ್ವಾಮಿ, ಶಿವಲಿಂಗಯ್ಯ, ಚಂದ್ರಶೇಖರ, ಸಂತೋಷ, ಚಂದ್ರು, ಬಿಳಿಗೌಡ, ತಮ್ಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net