

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರಿ ನೌಕರರಂತೆ ಮಹಾನಗರ ಪಾಲಿಕೆ ನೌಕರರಿಗೂ 7ನೇ ವೇತನ ಆಯೋಗದ ಸೌಲಭ್ಯ ವಿಸ್ತರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹು-ಧಾ ಮಹಾನಗರ ಪಾಲಿಕೆ ನೌಕರರ ಸಂಘದಿ0ದ ನಗರದ ಪಾಲಿಕೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಮಹಾನಗರ ಪಾಲಿಕೆ ವೃಂದ ಹಾಗೂ ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಪ್ರಕಟಿಸಬೇಕು. ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಕೆಜಿಐಡಿ, ಜಿಪಿಎಫ್ ಸೌಲಭ್ಯ ನೀಡಬೇಕು. ಜ್ಯೋತಿ- ಆರೋಗ್ಯ ಸಂಜೀವಿನಿಯನ್ನು ಜಾರಿಗೊಳಿಸಬೇಕು. ಪ್ರತಿವರ್ಷ ಕ್ರೀಡಾಕೂಟ ಆಯೋಜಿಸಬೇಕು. ವೃಂದವಾರು ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು. ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ಗಂಗಾಧರ ಮನಕಟ್ಟಿಮಠ, ನಾಗೇಶ ಅಡಿವಪ್ಪನವರ ಹಿರೇಮಠ, ಮಂಜುನಾಥ ರಾಯಪ್ಪನವರ, ಸಂಜಯ ಅರಕೇರಿ, ನವೀನ ಹಿರೇಮಠ, ಮುರುಗೇಶ ಮಲ್ಲಾಪುರ, ಸಂಜಯ ಗೋಡ್ಕೆ, ಈರಣ್ಣ ಮಾಳಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.