ಶಾಲಾ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಿ, ಹನಮಾಪೂರದಲ್ಲಿ ವಿದ್ಯಾರ್ಥಿಗಳು-ಗ್ರಾಮಸ್ಥರಿಂದ ಪ್ರತಿಭಟನೆ

Protest by students
ತಾಲೂಕಿನ ಹನಮಾಪೂರದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಜನರಿಂದ ಕಿಕ್ಕಿರಿದಿದ್ದ ಬಸ್ ತಡೆದು ಹೆಚ್ಚುವರಿ ಬಸ್ ಬಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
Published on

ಯಲಬುರ್ಗಾ: ಶಾಲಾ-ಕಾಲೇಜು ಸಮಯಕ್ಕೆ ಹೆಚ್ಚುವರಿ ಬಸ್ ಬಿಡುವಂತೆ ಒತ್ತಾಯಿಸಿ ತಾಲೂಕಿನ ಹನಮಾಪೂರದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಜನರಿಂದ ಕಿಕ್ಕಿರಿದಿದ್ದ ಬಸ್ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿದಿನ ಬೆಳಗ್ಗೆ ಜಿ. ವಿರಾಪೂರ, ಕುದ್ರಕೊಟಗಿ, ವಜ್ರಬಂಡಿ, ಎನ್. ಜರಕುಂಟಿ, ಮಂಡಲಮರಿ, ಕೋನಸಾಗರದಿಂದ ಯಲಬುರ್ಗಾ ಶಾಲಾ-ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ತೆರಳುತ್ತಿದ್ದೇವೆ. ಬಸ್‌ಗಳು ಇದ್ದರೂ ನಿಲ್ಲುವುದಕ್ಕೂ ಜಾಗವಿಲ್ಲದಂತೆ ತುಂಬಿರುತ್ತವೆ.

ಇದರಿಂದ ಶಾಲಾ-ಕಾಲೇಜಿಗೆ ಹೋಗಲು ತೊಂದರೆಯಾಗಿದೆ. ಹೀಗಾಗಿ ಹೆಚ್ಚುವರಿ ಬಸ್ ಬಿಡುವವರೆಗೆ ಹೋರಾಟ ಮುಂದುವರಿಸುವುದಾಗಿ ಪಟ್ಟುಹಿಡಿದರು. ತಾತ್ಕಾಲಿಕವಾಗಿ ಮತ್ತೊಂದು ಬಸ್ ಬಿಟ್ಟ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಮಂಜುಳಾ, ಬಿ.ಕೆ., ಹುಲಿಗೇಮ್ಮ ಎಂ, ಗ್ರಾಮಸ್ಥರಾದ ಮಲ್ಲಪ್ಪ ಮೇಟಿ, ದುರಗಪ್ಪ ಹರಿಜನ, ಮಂಜಪ್ಪ ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net