ಶಾರದಾದೇವಿನಗರ ಹಿತರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ

6
Published on

ಮೈಸೂರು: ನಗರ ಪಾಲಿಕೆ ಅಧಿಕಾರಿಗಳು ಸರಿಯಾದ ರೀತಿ ಸ್ಪಂದಿಸುತ್ತಿಲ್ಲ ಹಾಗೂ ಬಡಾವಣೆಯ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಎಂದು ಆರೋಪಿಸಿ ಶಾರದಾದೇವಿನಗರ ಹಿತರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.


ವಲಯ ಕಚೇರಿ-3ರ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಶಾರದಾದೇವಿನಗರ, ಆನಂದನಗರ, ನಿವೇದಿತಾನಗರ ಅತ್ಯಂತ ಯೋಜಿತ ಬಡಾವಣೆಗಳಾಗಿದ್ದು, ಇವುಗಳ ನಿರ್ವಹಣೆಯನ್ನು ಬಹಳ ಸುಲಭದಲ್ಲಿ

ಮಾಡಿಕೊಂಡು ಹೋಗಬಹುದಾಗಿದೆ. ಆದರೆ ಪಾಲಿಕೆ ಅಧಿಕಾರಿಗಳು ಗೋಜಲು ಮಾಡಿಕೊಂಡು ಸಮಸ್ಯೆ ತಂದೊಡ್ಡಿದ್ದಾರೆ. ಇದರಿಂದಾಗಿ ಯೋಜಿತ ಬಡಾವಣೆ ಕೂಡ ಸಮಸ್ಯೆಯ ಆಗರವಾಗಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net