

ಗುಳೇದಗುಡ್ಡ : ಕುಡಿಯವ ನೀರು ಪೂರೈಕೆ, ಬೀದಿ ದೀಪ, ಕಸ ವಿಲೇವಾರಿ ಸೇರಿ ಮೂಲ ಸೌಕರ್ಯ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪಟ್ಟಣದ ರಜಂಗಳ ಪೇಟೆಯ ಸಾರ್ವಜನಿಕರು ಬುಧವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಹಲಗೆ ಬಾರಿಸುತ್ತಾ, ಖಾಲಿ ಕೊಡಗಳೊಂದಿಗೆ ಪುರಸಭೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪುರಸಭೆಗೆ ಸಾಕಷ್ಟು ಅನುದಾನ ಕೊಡುತ್ತಿದ್ದರೂ, ಪಟ್ಟಣಕ್ಕೆ ಮೂಲ ಸೌಕರ್ಯ ನೀಡುತ್ತಿಲ್ಲ. ಅಲ್ಲದೇ ಇ-&ಖಾತಾ ಯೋಜನೆ ಕೆಲಸಗಳು ಸರಿಯಾಗಿ ಮಾಡುತ್ತಿಲ್ಲ. ಇದೇ ರೀತಿ ಮುಂದುವರಿದರೆ ಸಂಬಂಧಿಸಿದ ಸಚಿವರಿಗೆ ದೂರು ನೀಡಿ, ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೇಮಣ್ಣ ಮೇಡಿ, ಬಸವರಾಜ ಕೊಂಗಿ, ಮಾರ್ಕಂಡೆಪ್ಪ ದೇವರಡ್ಡಿ, ಶಂಕರಪ್ಪ ಹೋಟಿ, ರಾಜು ವಗ್ಗಾ, ಶಂಕ್ರಪ್ಪ ಶಿರೂರ, ದೇವೇಂದ್ರಪ್ಪ ಗಾಯದ, ಈರಣ್ಣ ಹೋಟಿ, ಮಹಾಗುಂಡಪ್ಪ ಹಾನಾಪುರ, ಗೋಪಾಲ ಧೂಪದ, ಬಸವರಾಜ ಮನಗೂಳಿ, ಸುರೇಶ ಸುರೇಬಾನ, ಯಮನೂರಪ್ಪ ಮೇಡಂ ಇದ್ದರು.
ಗುಳೇದಗುಡ್ಡದ ಪುರಸಭೆಗೆ ಪಟ್ಟಣದ ರಜಂಗಳ ಪೇಟೆ ನಿವಾಸಿಗಳು ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.