ರಸ್ತೆ ತಗ್ಗು-ಗುಂಡಿ ಮುಚ್ಚಿ ಪ್ರತಿಭಟನೆ

People protesting by repairing road
Published on

ನವಲಗುಂದ: ಪಟ್ಟಣದ ನೀಲಮ್ಮನ ಕೆರೆ ಸಮೀಪ ಹುಬ್ಬಳ್ಳಿ-ವಿಜಯಪುರ ಹೆದ್ದಾರಿ ಹಾಗೂ ಅಣ್ಣಿಗೇರಿ ರಸ್ತೆಯಲ್ಲಿನ ತಗ್ಗು-ಗುಂಡಿಗಳಿಗೆ ಎಂ.ಸ್ಯಾಂಡ್, ಜಲ್ಲಿಕಲ್ಲು ಹಾಕಿ ಮುಚ್ಚುವ ಮೂಲಕ ಸಾರ್ವಜನಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸೈಪುದ್ದೀನ್ ಅವರಾದಿ, ಕಳೆದ ಒಂದು ವರ್ಷದಿಂದ ಹಿಂದೆಯೇ ರಸ್ತೆಯಲ್ಲಿ ತಗ್ಗು- ಗುಂಡಿಗಳು ಬಿದ್ದಿವೆ.

ಇದರಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿದಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದೇ ರಸ್ತೆ ಮೂಲಕ ಓಡಾಡುತ್ತಾರೆ.

ಆದರೂ, ತಗ್ಗು-ಗುಂಡಿಗಳ ಮುಚ್ಚಲು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದರಿಂದ ಸಾರ್ವಜನಿಕರು ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದೇವೆ.

ಇನ್ನಾದರೂ ಲೋಕೋಪಯೋಗಿ ಅಧಿಕಾರಿಗಳು ಕಣ್ಣು ತೆರೆಯಲಿ ಎಂದರು. ನಬಿಸಾಬ್ ನದಾಫ್, ರಾಘವೇಂದ್ರ ಕಲಾಲ, ಫಕೀರೇಶ ಹೂಗಾರ, ಮೆಹಬೂಬ ಚಾಹುಸೇನ, ಆನಂದ ಇಬ್ರಾಹಿಂಪುರ, ಮಲ್ಲು ಸುಬೇದಾರಮಠ, ಜಬ್ಬರ್ ಧಾರವಾಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net