ರೈಲ್ವೆ ಕೂಲಿಗಳಿಂದ ಪ್ರತಿಭಟನೆ

New Porters new
Published on

ಹುಬ್ಬಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ಕೂಲಿ ಪೋರ್ಟರ್ಸ್​ ಸಂದ ನೇತೃತ್ವದಲ್ಲಿ ರೈಲ್ವೆ ಕೂಲಿಕಾರರು ಇಲ್ಲಿನ ಎಸ್​ಎಸ್​ಎಸ್​ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನೈಋತ್ಯ ರೈಲ್ವೆ ವಲಯದಲ್ಲಿ ಕೂಲಿ ಮೇ ಆ್ಯಪ್​ ಅನ್ನು ಖಾಸಗಿ ಸಂಸ್ಥೆಯವರು ನಿರ್ವಹಿಸುತ್ತಿದ್ದು, ಇದನ್ನು ತಕ್ಷಣ ಸ್ಥಗಿತಗೊಳಿಸಬೇಕು. ಕೂಲಿ ಆಳುಗಳಿಗೆ ರೈಲ್ವೆಯಲ್ಲಿ ಕಾಯಂ ಉದ್ಯೋಗ ನೀಡಬೇಕು. ಬ್ಯಾಟರಿ ಆಟೋಗಳಲ್ಲಿ ಕೇವಲ ಹಿರಿಯ ನಾಗರಿಕರು, ಅನಾರೋಗ್ಯಕ್ಕೆ ಈಡಾದವರು ಹಾಗೂ ಅಂಗವಿಕಲರನ್ನು ಮಾತ್ರ ಸಾಗಿಸಬೇಕು. ಈ ಆಟೋಗಳಲ್ಲಿ ಸರಕು ಸಾಗಿಸುವುದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈಲ್ವೆ ಸಚಿವರಿಗೆ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಸಂದ ಅಧ್ಯಕ್ಷ ಮೊಹ್ಮದ್​ಅಲಿ ನದಾ, ಚಂದ್ರು ಚಲವಾದಿ, ಜಾರಖಾನ ಜಮಖಾನೆವಾಲೆ ಹಾಗೂ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net