ಡಿಸಿ ಕಚೇರಿ ಎದುರು ರಾಷ್ಟ್ರಭಕ್ತರ ಬಳಗದ ಪದಾಧಿಕಾರಿಗಳ ಪ್ರತಿಭಟನೆ

rastrabhaktara balaga protest
ಜನಿವಾರ ತೆಗೆಸಿದ ಅಧಿಕಾರಿಗಳ ಕ್ರಮ ಖಂಡಿಸಿ ರಾಷ್ಟ್ರಭಕ್ತರ ಬಳಗದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆ.ಇ.ಕಾಂತೇಶ್, ಎಂ.ಶಂಕರ್, ಮೋಹನ್ ಜಾಧವ್, ರಾಜಣ್ಣ, ಶಿವಾಜಿ, ಸೀತಾಲಕ್ಷ್ಮೀ, ಕುಬೇರಪ್ಪ, ಎಸ್.ಜಿ.ಬಾಲು, ಗೀತಾ ಮಾನೆ ಇದ್ದರು.
Published on

ಶಿವಮೊಗ್ಗ: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಯಿಸಿದ್ದನ್ನು ಖಂಡಿಸಿ ರಾಷ್ಟ್ರಭಕ್ತರ ಬಳಗದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೆಎಇ ನಡೆಸಿದ ಕೆ-ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಧಾರ್ಮಿಕ ಸಂಕೇತಗಳನ್ನು ಬಲವಂತವಾಗಿ ತೆಗೆಸಿ ಬ್ರಾಹ್ಮಣ ಸಮಾಜಕ್ಕೆ ಅಪಮಾನ ಮಾಡಿದೆ. ಜನಿವಾರವನ್ನು ಅಶುಭವಾದಾಗ ಮಾತ್ರ ತೆಗೆಸಲಾಗುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಪರೀಕ್ಷಾ ಕೇಂದ್ರಗಳಲ್ಲೂ ಜನಿವಾರ ತೆಗೆಸುವ ಮೂಲಕ ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಬಳಗದ ಸಂಚಾಲಕ ಕೆ.ಈ.ಕಾಂತೇಶ್, ಕಾಂಗ್ರೆಸ್ ಸರ್ಕಾರ ಬಂದ ನಂತರ ಹಿಂದುಗಳ ಮೇಲೆ ಗದಾಪ್ರಹಾರ ನಿಂತಿಲ್ಲ. ಶೇ.4ರಷ್ಟು ಮೀಸಲಾತಿ ನೀಡುವ ಮೂಲಕ ಮುಸ್ಲಿಮರ ತುಷ್ಠೀಕರಣ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ಮುಂದೆ ಹಿಂದುಗಳ ಮೇಲೆ ಕೈ ಇಟ್ಟರೆ ಸರ್ಕಾರವೇ ಭಸ್ಮವಾಗಲಿದೆ. ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯ ಜನಿವಾರ ತೆಗೆಯಿಸಿ ಭಾವನೆಗಳ ಮೇಲೆ ಚೆಲ್ಲಾಟವಾಡಲು ಹೊರಟಿದ್ದೀರಿ. ನಾಲ್ಕು ದಿನದೊಳಗೆ ಸಿಇಟಿ ಪರೀಕ್ಷೆ ವಂಚಿತ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಜನಿವಾರ ತೆಗೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಎಂ.ಶಂಕರ್, ಮೋಹನ್ ಜಾಧವ್, ರಾಜಣ್ಣ, ಶಿವಾಜಿ, ಸೀತಾಲಕ್ಷ್ಮೀ, ಕುಬೇರಪ್ಪ, ಎಸ್.ಜಿ.ಬಾಲು, ಗೀತಾ ಮಾನೆ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net