

ಧಾರವಾಡ: ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ನರೇಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಗ್ರಾಮದ ಮುಖಂಡರು ವಿದ್ಯಾರ್ಥಿಗಳೊಂದಿಗೆ ಗ್ರಾಮೀಣ ಬಿಇಒ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಕುಂದಗೋಳ ತಾಲೂಕಿನ ಸ0ಶಿ ಗ್ರಾಮದಲ್ಲಿ ಶನಿವಾರ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಖೋಖೋದಲ್ಲಿ ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಅರ್ಹತೆ ಗಳಿಸಿದ್ದ ನರೇಂದ್ರ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಣ ಇಲಾಖೆಯ ಅಽಕಾರಿಗಳು ನರೇಂದ್ರ ವಿದ್ಯಾರ್ಥಿಗಳಿಗೆ ಆಡಲು ಅವಕಾಶ ನೀಡಿದೆ ಏಕಪಕ್ಷೀಯವಾಗಿ ಮತ್ತೊಂದು ಶಾಲೆಯ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮÁಡುವ ಮೂಲಕ ಅನ್ಯಾಯ ಎಸಗಿದ್ದಾರೆ. ಅಽಕಾರಿಗಳು ನಿಯಮಾವಳಿ ಉಲ್ಲಂಘಿಸಿದ್ದು, ಮಕ್ಕಳಿಗೆ ನ್ಯಾಯ ಒದಗಿಸಬೇಕು ಎಂದು ಬಿಇಒ ರಾಮಕೃಷ್ಣ ಸದಲಗಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ ಹಟ್ಟಿಹೋಳಿ, ಗ್ರಾಮಸ್ಥರಾದ ಬಸವರಾಜ ಪಮ್ಮನವರ, ರಾಯನಗೌಡ ಪಾಟೀಲ, ಅಪ್ಪಣ್ಣ ಹಡಪದ, ಶಂಕರ ಕೋಮಾರದೇಸಾಯಿ, ನಾಗಪ್ಪ ಸೋಗಿ, ಸಂಜು ಕೋಟಿ, ನಾಗೇಶ ತೇಗೂರ, ಇತರರಿದ್ದರು.