ವಿದ್ಯಾರ್ಥಿನಿ ಹತ್ಯೆಗೈದವರಿಗೆ ಕಠಿಣ ಶಿಕ್ಷೆ ವಿಧಿಸಿ, ಮುಂಡಗೋಡದಲ್ಲಿ ವೈದ್ಯಕೀಯ ಸಂಘದಿಂದ ಪ್ರತಿಭಟನೆ

17mnd1- IMA Protest
Published on


ಮುಂಡಗೋಡ: ಕೋಲ್ಕತದ ವೈದ್ಯ ವಿದ್ಯಾರ್ಥಿನಿ ಮೇಲೆ ಬಲತ್ಕಾರ ನಡೆಸಿ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದವರು ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರೇಡ್- 2 ತಹಸೀಲ್ದಾರ್ ಚಂದ್ರಶೇಖರ ಹೊಸಮನಿ ಅವರ ಮೂಲಕ ಪ್ರಧಾನಮಂತ್ರಿಗೆ ಶನಿವಾರ ಮನವಿ ಸಲ್ಲಿಸಿದರು.
ಪಟ್ಟಣದ ಹೆಗಡೆ ಆಸ್ಪತ್ರೆಯ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಶಿವಾಜಿ ವೃತ್ತದಲ್ಲಿ ಕೆಲ ಸಮಯ ಮಾನವ ಸರಪಳಿ ನಿರ್ವಿುಸಿ ಕೊಲೆಯಾದ ವೈದ್ಯಕಿಯ ವಿದ್ಯಾರ್ಥಿನಿಯ ಆತ್ಮಕ್ಕೆ ಶಾಂತಿ ಕೋರಲಾಯಿತು.
ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ. ರವಿ ಹೆಗಡೆ ಮಾತನಾಡಿ, ಸಮಾಜದಲ್ಲಿ ವೈದ್ಯರ ಮೇಲೆ ದೌರ್ಜನ್ಯ ಕೊನೆಗೊಳ್ಳಬೇಕು ಎಂದು ಒತ್ತಾಯಿಸಿದರು.
ವೈದ್ಯರಾದ ಡಾ.ಪಿ.ಪಿ. ಛಬ್ಬಿ, ಡಾ. ಸುರೇಶ ದೇಸಾಯಿ, ಡಾ. ಭರತ್ ತಂತ್ರಿ, ಡಾ. ಗಾಯತ್ರಿ ಹೆಗಡೆ, ತಾಲೂಕು ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿ. ಡಾ. ಸಂಜಯ ಗಲಗಲಿ, ಡಾ. ಸಂದೇಶ ಛಬ್ಬಿ, ಡಾ. ಸುಹಾನಿ ಜೈನ್, ಡಾ. ಸತ್ಯನಾರಾಯಣ, ಡಾ. ದೀಪಾ ತಂತ್ರಿ, ಡಾ. ಸಿದ್ದಪ್ಪ, ಡಾ.ರಫಿಕ್ ಹವಾಲ್ದಾರ್, ಡಾ. ಸುಮಾ ಪೂಜಾರಿ, ಡಾ. ಸೌಮ್ಯ ಮರಾಠಿ, ಡಾ. ಗ್ಲಾ್ಯಡೀಯಸ್, ಡಾ. ಮಲ್ಲಿಕಾರ್ಜುನ, ಡಾ. ಕನಕರಾಜ್, ಡಾ. ಲಕ್ಷ್ಮಿ ಬಡಿಗೇರ, ಡಾ. ವಿದ್ಯಾವತಿ ಗಲಗಲಿ, ಡಾ. ಕಿರಣ ಹುಲಗೂರ, ಡಾ. ನವಿನ್ ಬಡಿಗೇರ, ಡಾ. ನವೀನ್ ಗಡೇದ್, ಡಾ. ಮಯೂರ ಮಸಾಲ್ದಿ ಇದ್ದರು.
ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳ ಹಿಂಡು: ಮುಂಡಗೋಡ: ಖಾಸಗಿ ಆಸ್ಪತ್ರೆ ವೈದ್ಯರು ಹೊರ ರೋಗಿ ವಿಭಾಗ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರಿಂದ ರೋಗಿಗಳು ಅನಿವಾರ್ಯವಾಗಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡರು.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಕೂಡ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಸೇವೆಯನ್ನು ಎಂದಿನಂತೆ ಮುಂದುವರಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ಕೆಲ ವೈದ್ಯರ ಒಂದು ತಾಸಿನವರೆಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಅನುಮತಿ ಪಡೆದು ಮತ್ತೆ ಮರಳಿ ಆಸ್ಪತ್ರೆಗೆ ಬಂದು ಸೇವೆ ಸಲ್ಲಿಸಿದರು.

ವೈದ್ಯರ ಮುಷ್ಕರಕ್ಕೆ ನಮ್ಮ ಬೆಂಬಲವೂ ಇದೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಎಂದಿನಂತೆ ಸೇವೆ ಇರಲಿದೆ. ಎಲ್ಲ ವೈದ್ಯರು ಸೇವೆ ಸಲ್ಲಿಸುತ್ತಿದ್ದು ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿದ್ದೇವೆ. ರೋಗಿಗಳ ಸಂಖ್ಯೆಯೂ ಶನಿವಾರ ಹೆಚ್ಚಾಗಿದೆ.| ಡಾ. ಸ್ವರೂಪ್​ರಾಣಿ ಪಾಟೀಲ, ವೈದ್ಯಾಧಿಕಾರಿ ತಾಲೂಕಾಸ್ಪತ್ರೆ ಮುಂಡಗೋಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net