ಸಶ್ಮಾನದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿಗದ ಜಾಗ, ಮೃತದೇಹವನ್ನು ಮುಖ್ಯ ರಸ್ತೆಯಲ್ಲಿಟ್ಟು ಪ್ರತಿಭಟನೆ

1cmy4-1.jpg
Published on

ಚಿಕ್ಕಬಳ್ಳಾಪುರ: ಸ್ಮಶಾನದ ಜಾಗದ ಅಕ್ರಮ ಒತ್ತುವರಿ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟಿಸಿದ್ದಾರೆ.
ಚಿಂತಾಮಣಿ ತಾಲೂಕಿನ  ರಂಗೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು ಗ್ರಾಮದಲ್ಲಿ ನಿಧನರಾದ ೬೦ ವರ್ಷದ ಕೊಂಡಪ್ಪ ಅಂತ್ಯ ಸಂಸ್ಕಾರಕ್ಕೆ ಸ್ಮಶಾನದ ಜಮೀನಿನಲ್ಲಿ ಮಣ್ಣಿನ ಗುಂಡಿ ತೆಗೆಯಲು ಹೋದಾಗ ಕೆಲ ವ್ಯಕ್ತಿಗಳು ಅಡ್ಡಿಪಡಿಸಿದ್ದಾರೆ. ಇದರಿಂದ ಸಂಬಂಧಿಕರು ರಸ್ತೆಯಲ್ಲಿ ಮೃತದೇಹವನ್ನಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇದರ ಬಗ್ಗೆ ಮಾಹಿತಿ ಪಡೆದ ಕಂದಾಯ ಇಲಾಖೆಯ ಅಧಿಕಾರಿಗಳು, ಭೂ ಮಾಪನ ಇಲಾಖೆಯ ಅಧಿಕಾರಿಗಳು ಪೊಲೀಸರೊಂದಿಗೆ ಬಂದು ಸ್ಮಶಾನ ಜಾಗ ಗುರುತಿಸಿ ಕೊಡುವುದಕ್ಕೆ ಸರ್ವೆ ಕಾರ್ಯ ಕೈಗೊಂಡರು. ಆದರೆ, ಗ್ರಾಮದವರು ಅವರ ಮಾತಿಗೆ ಮನ್ನಣಿ ನೀಡಲಿಲ್ಲ. ಸರ್ವೇ ಕಾರ್ಯ ಸೂಕ್ತ ರೀತಿಯಲ್ಲಿ ನಡೆದಿಲ್ಲ ಹಾಗೂ ಸ್ಮಶಾನದ ಜಮೀನು ಸರ್ವೆ ನಂ:೦೮ ರಲ್ಲಿ ಬರುತ್ತದೆ ಅಲ್ಲಿಯೇ ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಇನ್ನು ಒತ್ತುವರಿ ಆರೋಪ ಎದುರಿಸುತ್ತಿರುವ ಜಮೀನಿನ ಮಾಲೀಕರಾದ ಸಿದ್ದನಾರಾಯಣಸ್ವಾಮಿ ಮಾತನಾಡಿ, ನನ್ನ ಜಾಗ ನಾನು ಸಮತಟ್ಟು ಮಾಡಿಕೊಂಡಿದೇನೆ. ಸ್ಮಶಾನ ಜಮೀನು ಎಲ್ಲಿದೆ ಸರ್ವೇ ಮಾಡಿಸಿಕೊಳ್ಳಲಿ, ನನ್ನ ಜಾಗ ಎಷ್ಟು ಇದೆಯೋ ಅಷ್ಟೋ ಸರ್ವೇ ಮಾಡಿ ಕೊಡಲಿ, ಬೇರೆ ಜಾಗ ನನಗೆ ಬೇಡ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net