ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ

08 yelandur 01
ಅಂಬೇಡ್ರ್ಕರ್ ಭವನ ಹಾಗೂ ಮೊಬೈಲ್ ಟವರ್‌ನ ಸಮಸ್ಯೆ ಬಗೆಹರಿಸುವಂತೆ ಆಗ್ರಹಸಿ ವೈ.ಕೆ.ಮೋಳೆ ಗ್ರಾಮಸ್ಥರು ಗುರುವಾರ ಯಳಂದೂರು ಪಟ್ಟಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
Published on

ಯಳಂದೂರು: ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯ ಸರ್ವೇ ನಂ.543ರಲ್ಲಿರುವ 2.03 ಎಕರೆ ಜಮೀನಿನಲ್ಲಿ ನಿರ್ಮಾಣ ಮಾಡುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿಗೆ ವಿನಾ ಕಾರಣ ಪೊಲೀಸರು ಅಡ್ಡಿಪಡಿಸಿದರು ಎಂದು ಆರೋಪಿಸಿ ಗ್ರಾಮಸ್ಥರು ಗುರುವಾರ ರಾತ್ರಿ ಪಟ್ಟಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬಡಾವಣೆಯಲ್ಲಿ 100150 ಅಡಿ ಜಾಗವನ್ನು ಸಮಾಜ ಕಲ್ಯಾಣ ಇಲಾಖೆಗೆ ನೀಡಲಾಗಿದೆ. ಇಲ್ಲಿ 37 ಲಕ್ಷ ರೂ.ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಇದಕ್ಕೆ ವೈ.ಕೆ.ಮೋಳೆ ಗ್ರಾಮದ ಮಹದೇವಶೆಟ್ಟಿ, ದೊಡ್ಡಪುಟ್ಟ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇವೆ ಎಂದು ಕಾಮಗಾರಿ ನಿಲ್ಲಿಸುವಂತೆ ಪೊಲೀಸರ ಮೊರೆ ಹೋಗಿದ್ದರು. ಅವರ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಕಾಮಗಾರಿ ತಡೆದಿದ್ದಾರೆ.
ವೈ.ಕೆ. ಮೋಳೆ ಗ್ರಾಮದ ಮಹದೇವಶೆಟ್ಟಿ, ದೊಡ್ಡಪುಟ್ಟ ಸರ್ವೇ ನಂ.149ರ ಸ್ಥಳಕ್ಕೆ ತಡೆಯಾಜ್ಞೆ ತಂದಿದ್ದಾರೆ. ಆದರೆ, ಕಾಮಗಾರಿ ನಡೆಯುತ್ತಿರುವುದು ಬೇರೆ ಸರ್ವೇನಂಬರ್‌ನಲ್ಲಿದೆ. ಹಾಗಾಗಿ, ತಡೆ ತಂದಿರುವುದು ಅಂಬೇಡ್ಕರ್ ಭವನ ನಿರ್ಮಾಣವಾಗುತ್ತಿರುವ ಸ್ಥಳಕ್ಕೂ ಸಂಬಂಧವಿಲ್ಲ. ಹಾಗಾಗಿ, ಕಾಮಗಾರಿ ನಡೆಸಲು ಅನುವು ಮಾಡಿಕೊಡುವಂತೆ ಸಾಕಷ್ಟು ಮನವಿ ಮಾಡಲಾಗಿದೆ. ಆದರೆ, ಇದಕ್ಕೆ ಪೊಲೀಸರು ಸ್ಪಂದಿಸುತ್ತಿಲ್ಲ. ಅಲ್ಲದೆ, ಗ್ರಾಮದ ಮುಖ್ಯ ರಸ್ತೆಯಲ್ಲಿ ಖಾಸಗಿ ಮೊಬೈಲ್ ಕಂಪನಿಯ ಟವರ್ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸಿಪಿಐ ಶಿವರಾಜ್ ಮುಧೋಳ್ ಹಾಗೂ ಪಿಎಸ್‌ಐ ಚಂದ್ರಹಾಸ್ ನಾಯಕ್ ಮಾತನಾಡಿ, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಹಾಗೂ ಟವರ್ ನಿರ್ಮಾಣ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಮುಖಂಡರಾದ ಎನ್.ಬುಲೆಟ್ ಸಿದ್ದರಾಜು, ಎಂ.ಮಂಜುನಾಥ್, ಡಿ.ದೊರೆಸ್ವಾಮಿ, ವಿ.ಮಹೇಶ್, ರಂಗಸ್ವಾಮಿ, ಕೃಷ್ಣಯ್ಯ, ಮಲ್ಲಯ್ಯ, ನಂಜುಂಡಸ್ವಾಮಿ, ಟಿ.ಮಹದೇವಸ್ವಾಮಿ, ಬಸವರಾಜು, ರಂಗಸಿ ಇದ್ದರು.

ಅಂಬೇಡ್ಕರ್ ಭವನ ಹಾಗೂ ಮೊಬೈಲ್ ಟವರ್‌ನ ಸಮಸ್ಯೆ ಬಗೆಹರಿಸುವಂತೆ ಆಗ್ರಹಸಿ ವೈ.ಕೆ.ಮೋಳೆ ಗ್ರಾಮಸ್ಥರು ಗುರುವಾರ ಯಳಂದೂರು ಪಟ್ಟಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
08ವೈಎಲ್‌ಡಿ ಚಿತ್ರ01

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net