ಜು.22 ರಂದು ಜನಶಕ್ತಿ ಸಂಘಟನೆಯಿಂದ ಪ್ರತಿಭಟನೆ

raichur
raichur
Published on

ರಾಯಚೂರು ತಾಲೂಕಿನ ವಿವಿಧ ಗ್ರಾಮಗಳ ಕೃಷಿ ಫಲವತ್ತಾದ ಭೂಮಿಯನ್ನು ಜಿಲ್ಲಾಡಳಿತ ಕೈಗಾರಿಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸ್ವಾಧೀನಪಡಿಸಿಕೊಳ್ಳುತ್ತಿರುವದನ್ನು ವಿರೋಧಿಸಿ ಜು.22 ರಂದು ಭೂ ಸ್ವಾಧೀನ ಅಧಿಸೂಚನೆಗೆ ಪತ್ರಕ್ಕೆ ದಹನ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆಂದು ಜನಶಕ್ತಿ ಸಂಘಟನೆ ಸಂಚಾಲಕ ಮಾರೆಪ್ಪ ಹರವಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಕುರುಬದೊಡ್ಡಿ, ಚಂದ್ರಬಂಡ ಮತ್ತು ಸಿಂಗನೋಡಿ ಗ್ರಾಮಗಳ 773 ಎಕರೆ ಭೂಮಿಯನ್ನಯು ಭೂ ಸ್ವಾಧೀನಪಡಿಸಿಕೊಳ್ಳಲು ಜು.28 ರಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಭೂ ಹಿಡುವಳಿದಾರರ ಸಭೆ ನಿಗಧಿ ಮಾಡಿದ್ದಾರೆ. ಆದರೆ ಭೂ ಸ್ವಾಧೀನಕ್ಕೆ ಯಾವ ರೈತರು ಸಿದ್ದರಿಲ್ಲ. ಕೃಷಿಯನ್ನೇ ಅವಲಂಬಿಸಿರುವ ಹಿಡುವಳಿದಾರರು ಭೂ ಸ್ವಾಧೀನ ಪ್ರಕ್ರಿಯೆಯಿಂದ ಆತಂಕಕ್ಕೆ ಸಿಲುಕಿದ್ದಾರೆ.


ಭೂ ಸ್ವಾಧೀನ ಕಾಯ್ದೆ 2013 ಪ್ರಕಾರ ಶೇ.80 ರಷ್ಟು ಹಿಡುವಳಿದಾರರು ಸಮ್ಮತಿ ಸೂಚಿಸಿದರೆ ಮಾತ್ರ ಸ್ವಾಧೀನ ಪಡಿಸಿಕೊಳ್ಳಲು ಅವಕಾಶವಿದೆ. ಆದರೆ ಯಾವ ರೈತರು ಭೂಮಿ ನೀಡಲು ಸಿದ್ದರಿಲ್ಲ. 22 ರಂದು ನಗರ ಬಸನವಭಾವಿ ವೃತ್ತದಿಂದ ಹಳೆ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಗುತ್ತದೆ. ಅಲ್ಲದೇ ಹಿಡುವಲಿದಾರರ ಸಭೆಗೂ ಭಾಗವಹಿಸಿ ರೈತರ ಆಕ್ಷೇಪವನ್ನು ಸಲ್ಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಂಜನೇಯ ಕುರುಬದೊಡ್ಡಿ, ನರಸಿಂಹಲು, ನರಸಪ್ಪ ಕುರುಬದೊಡ್ಡಿ, ಬಸವರಾಜ, ಭೀಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net