ಜೈನ ಮುನಿಗಳಿಗೆ ರಕ್ಷಣೆ ನೀಡಿ : ಮೈಸೂರಿನಲ್ಲಿ ಜೈನ ಸಂಘಟನೆಗಳಿಂದ ಪ್ರತಿಭಟನೆ

Protest by Jain organisations
Published on

ಮೈಸೂರು: ಬೆಳಗಾವಿ ಜಿಲ್ಲೆಯ ಹಿರೇಕೋಡು ಗ್ರಾಮದಲ್ಲಿ ಜೈನ ದಿಗಂಬರ ಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣ ಖಂಡಿಸಿ ದಿಗಂಬರ ಜೈನ ಸಮಾಜ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಮೌನ ಪ್ರತಿಭಟನೆ ನಡೆಯಿತು. ನಂತರ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಮುದಾಯದ ಮುನಿಗಳಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಲಾಯಿತು.

ಸಮಾಜಕ್ಕೆ ಜೈನರ ಕೊಡುಗೆ ಅಪಾರ. ಇದು ಅಹಿಂಸೆ ಸಾರಿದ ಧರ್ಮವೂ ಆಗಿದೆ. ಆದರೂ ಸರ್ವಸಂಗ ಪರಿತ್ಯಾಗಿಗಳಾದ ಮುನಿಗ ಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಹೀಗಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಆಚಾರ್ಯ ಶ್ರೀ ತೀರ್ಥಭದ್ರ ಸುರೀಶ್ವರ್‌ಜಿ ಮಹಾರಾಜ್, 108 ಶ್ರೀ ಪ್ರಗಲಬ್ದ್ ಮುನಿ ಮಹಾರಾಜ್, ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ ರಾಜ್ಯಾಧ್ಯಕ್ಷ ವಿನೋದ್ ಬಕ್ಲಿವಾಲ್, ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್ ಕುಮಾರ್, ಉಪಾಧ್ಯಕ್ಷ ಬಿ.ಭರತ್‌ರಾಜ್, ಕಾರ್ಯದರ್ಶಿ ಪಿ.ಎಸ್. ಲಕ್ಷ್ಮೀಶ್ ಬಾಬು, ಖಜಾಂಚಿ ಬಿ.ಜ್ವಾಲೇಂದ್ರ ಪ್ರಸಾದ್, ಸಹ ಕಾರ್ಯದರ್ಶಿ ಎನ್.ಜಿನೇಂದ್ರ ಪ್ರಕಾಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್.ಡಿ.ಮಹೇಶ್ ಪ್ರಸಾದ್, ಎ.ಎನ್.ಧರಣೇಂದ್ರನ್, ಕೆ.ಚಂದ್ರಶೇಖರ್ ಆರಿಗ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net