ಜೈನ ಸಮಾಜದಿಂದ ಮೌನ ಪ್ರತಿಭಟನೆ

mysore
Published on

ಮೈಸೂರು: ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಕ್ರೌರ್ಯ ಖಂಡಿಸಿ ಶ್ರೀ ದಿಗಂಬರ ಜೈನ ಸಮಾಜದ ವತಿಯಿಂದ ನಗರದ ಗಾಂಧಿ ಚೌಕದಲ್ಲಿ ಶನಿವಾರ ಮೌನ ಪ್ರತಿಭಟನೆ ನಡೆಸಲಾಯಿತು.


ಬಾಂಗ್ಲಾ ದೇಶದ ಹಿಂದುಗಳನ್ನು ರಕ್ಷ್ಷಿಸಿ, ಹಿಂದುಗಳ ಮೇಲೆ ಹಿಂಸೆಯನ್ನು ನಿಲ್ಲಲಿ, ಹಿಂದುಗಳಿಗೆ ರಕ್ಷಣೆ ನೀಡಿ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ತಡೆಯಿರಿ, ದೇವಾಲಯಗಳನ್ನು ರಕ್ಷಿಸಿ ಎಂಬ ಘೋಷವಾಕ್ಯ ಪ್ರದರ್ಶಿಸಲಾಯಿತು.


ದಿಗಂಬರ ಜೈನ ಸಂಘದ ಅಧ್ಯಕ್ಷ ಎಂ.ಆರ್.ಸುನೀಲ್‌ಕುಮಾರ್, ಪದಾಧಿಕಾರಿಗಳಾದ ಬಿ.ಭರತ್ ರಾಜ್, ಪಿ.ಎಸ್. ಲಕ್ಷ್ಮೀಶ್‌ಬಾಬು, ಬಿ. ಜ್ವಾಲೇಂದ್ರಪ್ರಸಾದ್, ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಡಿ.ಮಹೇಶ್ ಪ್ರಸಾದ್, ಎ.ಎನ್. ಧರಣೇಂದ್ರನ್, ಕೆ. ಚಂದ್ರಶೇಖರ್, ಅಶೋಕ್ ಪಾಟೀಲ್, ವಿ.ಭರತ್, ಎಸ್.ಪಿ.ಶ್ರೀಕಾಂತ್, ವಸುಪಾಲ್, ಎನ್. ಜಿನೇಂದ್ರಪ್ರಕಾಶ್, ಬಿ. ಸೀಮಂತಿನಿ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net