

ಧಾರವಾಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಜಿಲ್ಲಾ ಸಮಿತಿಯಿಂದ ನಗರದ ಜಿ.ಪಂ. ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಿರಂತರ ೬ ವರ್ಷ ಕಾರ್ಯನಿರ್ವಹಿಸಿದ ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದ ಬಿಲ್ ಕ್ಲರ್ಕ್, ಕ್ಲರ್ಕ್ ಹಾಗೂ ಕಂಪ್ಯೂಟರ್ ಆಪರೇಟರ್‌ಗಳನ್ನು ಗ್ರೇಡ್ ೨ ಹಾಗೂ ಲೆಕ್ಕ ಸಹಾಯಕರ ಹುದ್ದೆಗಳಿಗೆ ಬಡ್ತಿ ನೀಡಬೇಕು. ನಿವೃತ್ತರಿಗೆ ಗ್ರ‍್ಯಾಚುಟಿ ನೀಡಬೇಕು. ಮೃತ ನೌಕರರ ಕುಟುಂಬದ ಒಬ್ಬರಿಗೆ ಅನುಕಂಪ ಆಧಾರದ ಮೇಲೆ ನೌಕರಿ ಕೊಡಬೇಕು. ಪಂಪ್ ಆಪರೇಟರ್, ವಾಟರ್‌ಮನ್, ಸಿಪಾಯಿಗಳು ೫ ವರ್ಷ ಪೂರೈಸಿದ್ದರೆ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು. ಪ್ರತಿದಿನ ಧ್ವಜಾರೋಹಣ ಮಾಡುವ ಸಿಬ್ಬಂದಿಗೆ ೩ ವರ್ಷಗಳಿಂದ ಬಾಕಿ ಇರುವ ಗೌರವ ಧನ ನೀಡಬೇಕು ಎಂದು ಜಿ.ಪಂ. ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ಅವರ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಸಮಿತಿ ಅಧ್ಯಕ್ಷ ಬಿ.ಐ. ಈಳಿಗೇರ, ಎ.ಎಂ. ಖಾನ್, ಬಿ.ಎನ್. ಪೂಜಾರಿ, ಭೀಮಸೇನ ಕಾಗಿ, ಎನ್.ಎಂ. ಪಾಟೀಲ, ಇತರಿದ್ದರು.