ರೈತರಿಂದ ಪ್ರತಿಭಟನೆ ಅ. 25ರಂದು

Published on

ಹುಬ್ಬಳ್ಳಿ: ಬೆಂಬಲ ಬೆಲೆಯಲ್ಲಿ ಹೆಸರು ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಹಾಗೂ ಉಳ್ಳಾಗಡ್ಡಿಗೆ ಶೀಘ್ರ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಅ. 25ರಂದು ಬೆಳಗ್ಗೆ 11.30ಕ್ಕೆ ಅಮರಗೋಳದ ಎಪಿಎಂಪಿ (ಕೃಷಿ ಮಾರುಕಟ್ಟೆ ಕಾರ್ಯಾಲಯ) ಹಾಗೂ ಸಂಪೂರ್ಣ ಖರೀದಿ ವಹಿವಾಟು ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಧಾರವಾಡ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ನೇತೃತ್ವದಲ್ಲಿ ರೈತರು ಚಕ್ಕಡಿ, ಟ್ರ್ಯಾಕ್ಟರ್ ಮೂಲಕ ಎಪಿಎಂಸಿಯಲ್ಲಿ ಪ್ರತಿಭಟನೆ ನಡೆಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net