

ಮುಧೋಳ : ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ 2021-22ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಸೋಮವಾರ ವರ್ಚುವಲ್ ವೈಸ್ ಕಾಲ ಮೂಲಕ ಮಾಡಿ ರೈತರು ಹಾಗೂ ಷೇರುದಾರರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈತ ಸಂಘ ಪ್ರತಿಭಟನೆ ನಡೆಸಿತು.
ರೈತ ಮುಖಂಡರಾದ ಬಸಪ್ಪ ಸಂಗನ್ನವರ ಮಾತನಾಡಿ, ಕರೊನಾ ನೆಪ ಮಾಡಿ ಸರ್ವ ಸಾಧಾರಣ ಸಭೆಯನ್ನು ವರ್ಚುವಲ್ ಮೂಲಕ ನಡೆಸಿ ಆಡಳಿತ ಮಂಡಳಿ, ಷೇರುದಾರರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಇದು ರೈತ ವಿರೋಧಿ ಧೋರಣೆ ಎಂದು ಖಂಡಿಸಿದರು.
ಯಲ್ಲಪ್ಪ ಹೆಗಡೆ ಮಾತನಾಡಿ, ಶೇ.40 ಕಮಿಷನ್ ಸಚಿವರ ಕುಮ್ಮಕ್ಕಿನಿಂದ ವರ್ಚುವಲ್ ಸಭೆ ನಡೆದಿದೆ. ರನ್ನ ಕಾರ್ಖಾನೆಯ ದಿವಾಳಿಗೆ ಕಾರಣವಾದ ಆಡಳಿತ ಮಂಡಳಿಯನ್ನು ಸರ್ಕಾರ ವಜಾ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಗೋವಿಂದಪ್ಪ ಮೆಟಗುಡ್ಡ, ಗಂಗಯ್ಯ ನಾವಲಗಿಮಠ, ರಮೇಶ ಜಂಬಗಿ, ನಿಂಗಪ್ಪ ಇಟ್ಟನ್ನವರ, ತುಕಾರಾಮ ಮ್ಯಾಗಿನಮನಿ, ಶೇಖರ ಕಾಂಬಳೆ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರಾದ ರವೀಂದ್ರ ಲಕ್ಷನ್ನವರ, ಕೃಷ್ಣಾ ಪೂಜಾರಿ ಉಪಸ್ಥಿತರಿದ್ದರು.