ಜಿಲ್ಲಾ ಬ್ಯಾಂಕ್ ನೌಕರರ ಸಂಘದಿಂದ ಪ್ರತಿಭಟನೆ

5
Published on

ಮೈಸೂರು:  ಸರ್ಕಾರಿ ಬ್ಯಾಂಕ್ ಹಾಗೂ ವಿಮಾ ಕಂಪನಿಗಳನ್ನು ಸಂಪೂರ್ಣ ಬಲಗೊಳಿಸುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಕ್ರಿಯಾ ಸಮಿತಿ ಕರೆಯ ಮೇರೆಗೆ ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು.

ನಗರದ ಕೆನರಾ ಬ್ಯಾಂಕ್ ಮುಂಭಾಗದಿಂದ ಗಾಂಧಿವೃತ್ತದವರೆಗೆ ಮೆರವಣಿಗೆ ನಡೆಸಿದ ಅಧಿಕಾರಿಗಳು, ಸಿಬ್ಬಂದಿ, ಸರ್ಕಾರಿ ಬ್ಯಾಂಕ್ ಹಾಗೂ ವಿಮಾ ಕಂಪನಿಗಳನ್ನು ಸಂಪೂರ್ಣ ಬಲಗೊಳಿಸಬೇಕು, ಬ್ಯಾಂಕ್‌ಗಳ, ವಿಮಾ ಕಂಪನಿಗಳ ಖಾಸಗಿಕರಣ, ಬಂಡವಾಳ ಹಿಂಪಡೆಯುಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ವಿಮಾ ಕ್ಷೇತ್ರದಲ್ಲಿ ಶೇ.100 ವಿದೇಶಿ ಬಂಡವಾಳ ಹೂಡಿಕೆ ನಿಲ್ಲಿಸಿ, ಸರ್ಕಾರಿ ರಂಗದ ಸಾಮಾನ್ಯ ವಿಮಾ ಕಂಪನಿಗಳನ್ನು ವಿಲೀನಗೊಳಿಸಬೇಕು, ಬ್ಯಾಂಕ್‌ಗಳಲ್ಲಿ ನೇಮಕಾತಿ ಮಾಡುವ ಮೂಲಕ ಹೊರ ಗುತ್ತಿಗೆ ಆಧಾರದ ನಿಲ್ಲಿಸಬೇಕು. ಹೊಸ ಪಿಂಚಣಿ ಯೋಜನೆ ನಿಲ್ಲಿಸಿ, ಹಳೆಯ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕು. ಕಾರ್ಪೊರೇಟ್ ಸುಸ್ತಿದಾರರ ಬಾಕಿ ಇರುವ ಸಾಲದ ವಸೂಲಾತಿಗೆ ಬಿಗಿಯಾದ ಕ್ರಮಗಳನ್ನು ತೀವ್ರಗೊಳಿಸಬೇಕು ಎಂದು ಆಗ್ರಹಿಸಿದರು.

ಸಾಮಾನ್ಯ ಬ್ಯಾಂಕ್ ಗ್ರಾಹಕರ ವಿಧಿಸುವ ಸೇವಾ ಶುಲ್ಕ ಕಡಿತಗೊಳಿಸಲು ಕ್ರಮಕೈಗೊಳ್ಳಬೇಕು, ಜೀವ ವಿಮೆ ಹಾಗೂ ಆರೋಗ್ಯ ವಿಮೆಗಳ ಮೇಲೆ ವಿಧಿಸುವ ಜಿಎಸ್‌ಟಿ ನಿಲ್ಲಿಸಿ, ಕಾರ್ಮಿಕರ ಮೇಲೆ ವಿದಿಸಲು ನಿರ್ಧರಿಸಿರುವ ಹೊಸ ಲೇಬರ್ ಕೋಡ್ ರದ್ದು ಪಡಿಸಿಬೇಕು, ಕಾರ್ಮಿಕ ನ್ಯಾಯಾಲಯಗಳನ್ನು ಕಡಿತಗೊಳಿಸುವುದನ್ನು ವಾಪಸ್ ಪಡೆಯಬೇಕು, ಕಾರ್ಮಿಕ ಸಂಘಟನೆಗಳ ಹಕ್ಕುಗಳನ್ನು ಮೊಟಕು ಗೊಳಿಸುವ ಕ್ರಮಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಮೈಸೂರು ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಪದ್ಮನಾಭ ನಾಯಕ್, ವಿವಿಧ ಬ್ಯಾಂಕ್‌ಗಳ ಬಾಲು, ರಘುವೀರ್ ಭಂಡಾರ್ಕರ್‌ಡ್ಕರ್, ಕುಮಾರಸ್ವಾಮಿ, ಚಿನ್ಮಯಾನಂದ ಬಾಬು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net