ವಂಚನೆ ಸಂತ್ರಸ್ತ ಠೇವಣಿದಾರರಿಂದ ಪ್ರತಿಭಟನೆ: ಮುಚ್ಚಿರುವ ಸಂಸ್ಥೆಗಳಿಂದ ಹಣ ಹಿಂದಿರುಗಿಸಲು ಆಗ್ರಹ

mysore
Published on

ಮೈಸೂರು: ಮುಚ್ಚಿರುವ ಹಣಕಾಸು ಸಂಸ್ಥೆಗಳಿಂದ ಠೇವಣಿದಾರರಿಗೆ ಹಣವನ್ನು ಹಿಂದಿರುಗಿಸಬೇಕು ಎಂದು ಆಗ್ರಹಿಸಿ ‘ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ’ ಸಂಘಟನೆಯಿಂದ ನಗರ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.


ಈಗಾಗಲೇ ಪಿಎಸಿಎಲ್, ಸಾಯಿಪ್ರಸಾದ್, ಸಮೃದ್ಧ ಜೀವನ, ಗರಿಮಾ, ಹಿಂದುಸ್ತಾನ, ಅಗ್ರಿಗೋಲ್ಡ್ ಸ್ಟೋರ್ ಇಂಡಿಯಾ ಇನ್ನಿತರ ಹಣಕಾಸು ಸಂಸ್ಥೆಗಳು ಸ್ಥಗಿತಗೊಂಡಿವೆ. 2014ರಿಂದ ಇಲ್ಲಿಯವರೆಗೆ ಹಣ ತುಂಬಿದ ಗ್ರಾಹಕರಿಗೆ ಹಣ ಬಂದಿಲ್ಲ. ಬಡವರಾಗಿರುವ ಠೇವಣಿದಾರರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಈ ತರಹದ ಸುಮಾರು 250 ಹಣಕಾಸಿನ ಕಂಪನಿಗಳು ಬಂದ್ ಆಗಿವೆ. ಆದರೆ ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಆದ್ದರಿಂದ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೊಳಗಾದ ಸಂತ್ರಸ್ತರಿಗೆ ‘ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2029’ರ ಪ್ರಕಾರ ಹಣ ವಾಪಸ್ ಕೊಡಿಸಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net