ರಸ್ತೆಯಲ್ಲಿ ಟೇಪ್ ಕತ್ತರಿಸಿ ಪ್ರತಿಭಟನೆ

bnk prote
ಬಣಕಲ್‌ನಲ್ಲಿ ಹದಗೆಟ್ಟ ರಸ್ತೆಯಲ್ಲಿ ಟೇಪ್ ಕತ್ತರಿಸಿ ಸ್ಥಳೀಯರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಬಿ.ಎಸ್.ವಿಕ್ರಂ, ಅರುಣ್ ಪೂಜಾರಿ, ರಂಗನಾಥ್, ಗೋಪಾಲ್, ರಾಜೇಶ್ ಇತರರಿದ್ದರು.
Published on

ಬಣಕಲ್: ಬಣಕಲ್‌ನಿಂದ ಸಂತೆಗೆ ಸಾಗುವ ರಸ್ತೆ ದುರಸ್ತಿ ಕಾಣದೆ ಇರುವುದರಿಂದ ಸಾರ್ವಜನಿಕರು ರಸ್ತೆಗೆ ಟೇಪ್ ಕಟ್ಟಿ ಕತ್ತರಿಸಿ ಉದ್ಘಾಟನೆ ಮಾಡುವ ಮೂಲಕ ವಿಭಿನ್ನ ರೀತಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರ ಬಿ.ಎಸ್.ವಿಕ್ರಂ ಮಾತನಾಡಿ, ಬಣಕಲ್‌ನಿಂದ ಸಂತೆಗೆ ಸಾಗುವ ರಸ್ತೆಯನ್ನು ದುರಸ್ತಿ ಮಾಡದೆ ಹಲವು ವರ್ಷ ಕಳೆದಿವೆ. ರಸ್ತೆ ಗುಡ್ಡಹಟ್ಟಿ, ಕುವೆಂಪುನಗರ, ಸುಭಾಷ್‌ನಗರ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಗ್ರಾಪಂ ಅಧಿಕಾರಿಗಳು, ಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕಾಂಗ್ರೆಸ್ ನಾಯಕರೂ ರಸ್ತೆ ಕಾಮಗಾರಿಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.
ಜಗದೀಶ್ ಮಾತನಾಡಿ, ಕಳೆದ ವರ್ಷ ಎಂ.ಪಿ.ಕುಮಾರಸ್ವಾಮಿ ಶಾಸಕರಾಗಿದ್ದಾಗ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಸಂತೆ ರಸ್ತೆ ಬಿಟ್ಟು ಸುಭಾಷ್‌ನಗರದ ಬಳಿ ರಸ್ತೆ ಕಾಮಗಾರಿ ನಡೆಸಿದ್ದಾರೆ ಎಂದು ಆರೋಪಿಸಿದರು.
ಯೋಗೇಶ್ ಶೆಟ್ಟಿ ಮಾತನಾಡಿ, ಸಂತೆ ರಸ್ತೆ ಡಾಂಬರು ಕಾಣದೆ ಇಪ್ಪತ್ತು ವರ್ಷ ಕಳೆದಿದೆ. ಜನರು ಧೂಳುಮಯ ರಸ್ತೆಯಲ್ಲಿ ಸಂತೆಗೆ ಹೋಗಬೇಕಿದೆ. ಅಧಿಕಾರಿಗಳು ಸಂತೆ ರಸ್ತೆ ದುರಸ್ತಿಪಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರಾದ ಅರುಣ್ ಪೂಜಾರಿ, ರಂಗನಾಥ್, ಸಿದ್ಧಿಕ್, ಸಂದೇಶ್, ಅರುಣ್ ರೊಡ್ರಿಗಸ್, ಪ್ರದೀಪ್, ಅಭಿ, ಅನಿಲ್ ದೊಡ್ಡನಂದಿ, ಗೋಪಾಲ್ ಟೈಲರ್, ರಾಜೇಶ್ ಮತ್ತಿಕಟ್ಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net