ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

Protest by Congress workers
ಆಸ್ಸಾಂನಲ್ಲಿ ಕಾಂಗ್ರೆಸ್ ನ್ಯಾಯ ಯಾತ್ರೆಗೆ ಅಡ್ಡಿಪಡಿಸಿರುವ ಬಿಜೆಪಿ ಕಾರ್ಯಕರ್ತರ ನಡೆ ಖಂಡಿಸಿ ಸಿಂದಗಿ ಪಟ್ಟಣದ ತಾಲೂಕು ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಾಸಕ ಅಶೋಕ ಮನಗೂಳಿ, ಸುರೇಶ ಪೂಜಾರಿ, ಹಾಸಿಂ ಆಳಂದ ಇತರರಿದ್ದರು.
Published on

ಸಿಂದಗಿ: ಕಾಂಗ್ರೆಸ್ಸಿನ ಯುವ ನಾಯಕ ರಾಹುಲ್ ಗಾಂಧಿ ಆಸ್ಸಾಂನಲ್ಲಿ ನಡೆಸುತ್ತಿದ್ದ ನ್ಯಾಯ ಯಾತ್ರೆಗೆ ಬಿಜೆಪಿ ಕಾರ್ಯಕರ್ತರ ಅಡ್ಡಿ ಹಾಗೂ ಅಲ್ಲಿನ ದೇವಸ್ಥಾನಕ್ಕೆ ಅವರ ಪ್ರವೇಶ ನಿಬರ್ಂಧಿಸಿದ್ದನ್ನು ಖಂಡಿಸಿ ಮಂಗಳವಾರ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಶಾಸಕ ಅಶೋಕ ಮನಗೂಳಿ ಮಾತನಾಡಿ, ಭಾರತದ ಭವ್ಯ ಪರಂಪರೆಯಲ್ಲಿ, ಇಂತಹ ಅಸಭ್ಯ ವರ್ತನೆ ಬಿಜೆಪಿ ಕಾರ್ಯಕರ್ತರಿಂದ ಮಾತ್ರ ಸಾಧ್ಯವಿದೆ.

ರಾಮ ಭಾರತದ ಪ್ರತಿಯೊಬ್ಬರಿಗೂ ಪೂಜ್ಯನೀಯ. ಆದರೆ ಇಂದು ಬಿಜೆಪಿ ರಾಮನನ್ನು ಚುನಾವಣೆಗಾಗಿ ಬಳಸುತ್ತಿರುವುದು ಸಲ್ಲ.

ಕಾಂಗ್ರೆಸ್ ನಾಯಕರ ನ್ಯಾಯ ಯಾತ್ರೆಗೂ, ಅಲ್ಲಿನ ದೇವಸ್ಥಾನಕ್ಕೆ ತೆರಳಿದ ನಾಯಕ ರಾಹುಲ್ ಅವರನ್ನು ದೇವಸ್ಥಾನದ ಪ್ರವೇಶ ನಿರಾಕರಿಸಿರುವುದರಲ್ಲಿ ಯಾವ ಸಂಸ್ಕೃತಿ ಅಡಗಿದೆ ಎಂದು ಪ್ರಶ್ನಿಸಿದರು.

ಕೇವಲ ಮತಗಳಿಗಾಗಿ ಧರ್ಮ, ಜಾತಿ, ಮತಗಳ ನಡುವೆ ಕಂದಕ ಸೃಷ್ಠಿ ಮಾಡುವ ಬಿಜೆಪಿಗರ ಕುತಂತ್ರ ರಾಜಕಾರಣ ಬಹುದಿನ ನಡೆಯುವುದಿಲ್ಲ ಎಂದು ದೂರಿದರು.

ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಖಾದಿರ್ ಪಟೇಲ, ಹಾಸಿಂ ಆಳಂದ, ಮಹ್ಮದಪಟೇಲ ಬಿರಾದಾರ, ಸಂತೋಷ ಬಿರಾದಾರ, ವಿಜಯಲಕ್ಷ್ಮೀ ಹದನೂರ ಹಾಗೂ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net