ಪೊರಕೆ ಹಿಡಿದು ಪೌರ ಕಾರ್ಮಿಕರ ಪ್ರತಿಭಟನೆ

Oplus_131072
Oplus_131072
Published on

ಹುಬ್ಬಳ್ಳಿ: ಪೌರಕಾರ್ಮಿಕರ ನೇರ ನೇಮಕಾತಿ, ನೇರ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಲ್ಲಿಯ ಮಹಾನಗರ ಪಾಲಿಕೆ ಕಚೇರಿ ಮುಂದೆ ಧಾರವಾಡ ಜಿಲ್ಲಾ ಪೌರ ಕಾರ್ಮಿಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಯಿತು.

ಕೈಯಲ್ಲಿ ಪೊರಕೆ ಹಿಡಿದ ಪೌರ ಕಾರ್ಮಿಕರು, ರಾಜ್ಯ ಸರ್ಕಾರ ಹಾಗೂ ಪಾಲಿಕೆ ಆಯುಕ್ತರ ವಿರುದ್ಧ ಧಿಕ್ಕಾರ ಕೂಗಿದರು.

ಸರ್ಕಾರ ಈವರೆಗೂ 4 ನೇಮಕಾತಿ ಅದಿಸೂಚನೆ ಹೊರಡಿಸಿದೆ. ಆದರೆ, 8 ವರ್ಷದಲ್ಲಿ ಮೊದಲನೇ 134 ನೇರ ನೇಮಕಾತಿ ಇದುವರೆಗೂ ಮಾಡಿಕೊಂಡಿಲ್ಲ. ಇನ್ನುಳಿದ 870 ಹುದ್ದೆಗಳನ್ನು ಯಾವಾಗ ನೇಮಿಸಿಕೊಳ್ಳುತ್ತಾರೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

799 ನೇರ ವೇತನ ಪಾವತಿಗೆ ಅನುಮೋದನೆ ಪಡೆಯುತೇವೆ ಎಂದು ಆಯುಕ್ತರು ಭರವಸೆ ನೀಡಿದ್ದರು. 6 ತಿಂಗಳು ಗತಿಸಿದರೂ ನೀಡಿದ ಭರವಸೆ ಹುಸಿಯಾಗಿದೆ. ಇನ್ನು ವಿವಿಧ ಪ್ರಮುಖ ಬೇಡಿಕೆಗಳನ್ನು ಈಡೇರಿಸದೇ ಪೌರಕಾರ್ಮಿಕರನ್ನು ಶೋಷಣೆ ಮಾಡುವ ಮೂಲಕ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಸಂಘದ ಧಾರವಾಡ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಕನಕಪ್ಪ ಕೊಟಬಾಗಿ, ದತ್ತಪ್ಪ ಆಪುಸಪೇಟ್, ಯಲಪ್ಪ ಪಾಳೇದ, ಲಕ್ಷ್ಮೀ ಬೇತಾಪಲ್ಲಿ, ಯಮನವ್ವ ಬೆನಸಮಟ್ಟಿ, ವೆಂಕಟೇಶ ಪಾಲವಾಯಿ, ಭಾಗ್ಯಲಕ್ಷ್ಮೀ ಮಾದರ, ಹೊಳಲಮ್ಮ ಕಡಕೋಳ, ಹುಲಿಗೆಮ್ಮ ಚಿಕಟುಂಬಳ, ಕಸ್ತೂರಿ ತಮದಡ್ಡಿ, ಲಕ್ಷ್ಮೀ ತುರಿಹಾಳ, ನಾಗರಾಜ ದೊಡ್ಡಮನಿ ಇತರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net