

ಮೈಸೂರು: ದುಡಿಯುವ, ಶ್ರಮಜೀವಿಗಳ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ವತಿಯಿಂದ ಬುಧವಾರ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಹಾಗೂ ದೇಶದ ದುಡಿಯುವ ಜನರ ಬದುಕು ಸಂರಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಪ್ರಮಾಣ ಹೆಚ್ಚಿಸಿ ಸಾಮಾಜಿಕ ಭದ್ರತೆಗೆ ಹೆಚ್ಚಿನ ಹಣ ವಿನಿಯೋಗಿಸಬೇಕು. ದೇಶದ ಐಕ್ಯತೆ, ಸೌಹಾರ್ದತೆ ಹಾಳು ಮಾಡುವ ಶಕ್ತಿಗಳನ್ನು ನಿಯಂತ್ರಿಸಿ, ಸಂವಿಧಾನ ಸಂರಕ್ಷಿಸಬೇಕು.
ರೈಲ್ವೆ, ವಿದ್ಯುತ್, ಹಣಕಾಸು ವಲಯದ ಖಾಸಗೀಕರಣ ನಿಲ್ಲಿಸಿ ಸಾರ್ವಜನಿಕ ವಲಯ ಬಲಪಡಿಸಬೇಕು. ಕನಿಷ್ಠ ಕೂಲಿ 31 ಸಾವಿರ ರೂ. ನಿಗದಿಪಡಿಸಬೇಕು. ಕೆಲಸದ ಅವಧಿಯನ್ನು ವಾರಕ್ಕೆ 36 ಗಂಟೆಗಳಿಗೆ ನಿಗದಿಪಡಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗುತ್ತಿಗೆ ಹೊರಗುತ್ತಿಗೆ ಕಾರ್ಮಿಕರ ಶೋಷಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.